ಸೋಮವಾರ, ಮೇ 23, 2022
30 °C

ಅಲ್ಪಸಂಖ್ಯಾತರ ಪ್ರಗತಿಗೆ 260 ಕೋಟಿ ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯದ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ  ರೂ. 260 ಕೋಟಿಗೂ ಹೆಚ್ಚು ಮೀಸಲಿಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಘಟಕದ ಅಧ್ಯಕ್ಷ ಡಾ.ಮೋಸಿನ್ ಹೇಳಿದರು.ಅನುದಾನವು ಬಳಕೆಯಾಗದಿದ್ದರೆ ಅದು ವಾಪಾಸ್ಸಾಗುತ್ತದೆ. ಪ್ರತಿಯೊಬ್ಬರೂ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ  ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹಿಂದಿನ ಸರ್ಕಾರ ನೀಡದಿರುವುದನ್ನು ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದೆ.  ಈ ಹಿನ್ನೆಲೆಯಲ್ಲಿ  ಪ್ರತಿಯೊಂದು ಯೋಜನೆಯ ಬಗ್ಗೆ ಅರಿವು ಹೊಂದುವುದರ ಜತೆಯಲ್ಲಿ ಸದ್ಬಳಕೆ ಮಾಡಿಕೊಂಡುವಂತೆ ಸಲಹೆ ನೀಡಿದರು. ಶಿಕ್ಷಣ, ಆರೋಗ್ಯ ಮುಂತಾದ ವಲಯಗಳಲ್ಲಿ ಪ್ರಗತಿಯತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾಗಿದೆ ಎಂದರು.ಸುಹೇಲ್, ಸಿರಾಜ್, ಮುನಿವೆಂಕಟಪ್ಪ, ಶಮೀರ್ ಆಲಂಖಾನ್, ಅಸ್ಲಾಂಪಾಷ, ಅಲ್ತಾಫ್, ಬರೀದ್, ಕೆಂಪಣ್ಣ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.