ಅಲ್ಪಸಂಖ್ಯಾತ ಮಠಗಳ ಕಾಯ್ದೆ ವಾಪಸ್

7

ಅಲ್ಪಸಂಖ್ಯಾತ ಮಠಗಳ ಕಾಯ್ದೆ ವಾಪಸ್

Published:
Updated:

ಬೆಂಗಳೂರು: ಜೈನ, ಸಿಖ್ ಮತ್ತು ಬೌದ್ಧರ ಧಾರ್ಮಿಕ ಸಂಸ್ಥೆಗಳನ್ನು ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ತರುವ ತೀರ್ಮಾನವನ್ನು ಕೈಬಿಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಮಂಗಳವಾರ ಇಲ್ಲಿ ಹೇಳಿದರು.ಬಸದಿ, ಗುರುದ್ವಾರ, ಬುದ್ಧವಿಹಾರಗಳನ್ನು ಹಿಂದೂ ಧಾರ್ಮಿಕ ಕಾಯ್ದೆ ವ್ಯಾಪ್ತಿಗೆ ತರುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕೈಬಿಡಲು ನಿರ್ಧರಿಸಲಾಗಿದೆ. ಅಗತ್ಯಬಿದ್ದರೆ ಅವರಿಗಾಗಿಯೇ ಪ್ರತ್ಯೇಕ ಕಾಯ್ದೆಯನ್ನು ರೂಪಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಜೈನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಹಣ ನೀಡಲಿದ್ದು, ಅವು ಹಿಂದೂ ಅನುವಂಶಿಕವಾಗಿರುವ ಹಿನ್ನೆಲೆಯಲ್ಲಿ ಸದುದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿತ್ತು. ಆದರೆ ಹಿಂದೂ ಧರ್ಮದ ವ್ಯಾಖ್ಯೆಯಲ್ಲಿ ಬರಲು ಇಷ್ಟಪಡದ ಕಾರಣ ತಿದ್ದುಪಡಿಯಲ್ಲಿ ಈ ಅಂಶವನ್ನು ಸೇರಿಸದೆ ಇರಲು ತೀರ್ಮಾನಿಸಲಾಯಿತು ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry