ಅಲ್ಲಲ್ಲಿ ಉದ್ಯೋಗಾವಕಾಶ

7

ಅಲ್ಲಲ್ಲಿ ಉದ್ಯೋಗಾವಕಾಶ

Published:
Updated:
ಅಲ್ಲಲ್ಲಿ ಉದ್ಯೋಗಾವಕಾಶ

ರೈಲ್ವೆ ನೇಮಕಾತಿ ಘಟಕ

ನಾರ್ತ್ ಈಸ್ಟರ್ನ್ ರೈಲ್ವೆಯಲ್ಲಿ ಖಾಲಿ ಇರುವ 1442 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-9-2013.

ಹುದ್ದೆ ಹೆಸರು: ಗ್ರೂಪ್-ಡಿ

ವೇತನ ಶ್ರೇಣಿ: ರೂ 5,200- 20,200

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿಳಾಸ: ಅಸಿಸ್ಟೆಂಟ್ ಪರ್ಸೊನೆಲ್ ಆಫೀಸರ್/ ರೆಕ್ರೂಟ್‌ಮೆಂಟ್, ರೈಲ್ವೆ ರೆಕ್ರೂಟ್‌ಮೆಂಟ್ ಸೆಲ್, ಎನ್.ಇ.ರೈಲ್ವೆ, ಸಿಸಿಎಂ ಅನೆಕ್ಸ್ ಬಿಲ್ಡಿಂಗ್, ರೈಲ್ವೆ ರಸ್ತೆ ನಂ.14, ಗೋರಖ್‌ಪುರ (ಉತ್ತರ ಪ್ರದೇಶ)- 273 012

ಹೆಚ್ಚಿನ ಮಾಹಿತಿಗೆ http://ner.indianrailways.gov.inಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಬಿ.ಇ.ಎಲ್. 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-9-2013.

ಹುದ್ದೆ ಹೆಸರು: ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನೀಸ್ (ಎಲೆಕ್ಟ್ರಿಕಲ್-10 ಹುದ್ದೆ, ಸಿವಿಲ್-5 ಹ್ದ್ದುದೆ).

ವೇತನ ಶ್ರೇಣಿ: ರೂ 10,050- 25,450

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಮೂರು ವರ್ಷ)

ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ 300

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್/ ಸೆಂಟ್ರಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560 013

ಹೆಚ್ಚಿನ ಮಾಹಿತಿಗೆ http://www.bel-india.comಸೌತ್ ಇಂಡಿಯನ್ ಬ್ಯಾಂಕ್

15 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-9-2013.

ಹುದ್ದೆ ಹೆಸರು: ಪ್ರೊಬೇಷನರಿ ಲೀಗಲ್ ಆಫೀಸರ್

ವೇತನ ಶ್ರೇಣಿ: ರೂ 14,500- 25,700

ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಕಾನೂನು ಪದವಿ (5 ಅಥವಾ 3 ವರ್ಷದ ಪದವಿ)

ವಯೋಮಿತಿ: ಕನಿಷ್ಠ 23 ವರ್ಷ, ಗರಿಷ್ಠ 32 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ: ರೂ 500

ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 25-9-2013

ವಿಳಾಸ:  ದಿ ಡೆಪ್ಯುಟಿ ಮ್ಯಾನೇಜರ್ (ಪರ್ಸನಲ್ ಡಿಪಾರ್ಟ್‌ಮೆಂಟ್), ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್, ಹೆಡ್ ಆಫೀಸ್, ಎಸ್‌ಐಬಿ ಹೌಸ್, ಮಿಷನ್ ಕ್ವಾರ್ಟರ್ಸ್‌, ತ್ರಿಸ್ಸೂರ್- 680 001

ಹೆಚ್ಚಿನ ಮಾಹಿತಿಗೆ  http://www.southindianbank.comಬಾರ್ಡರ್ ಸೆಕ್ಯೂರಿಟಿ ಫೋರ್ಸ್

ಬಿ.ಎಸ್.ಎಫ್.ನಲ್ಲಿ 811 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-9-2013.

ಹುದ್ದೆ ವಿವರ: 1) ಎಎಸ್‌ಐ (ರೇಡಿಯೊ ಮೇಂಟೆನೆನ್ಸ್- ಆರ್.ಎಂ.)- 103 ಹುದ್ದೆ, ವಿದ್ಯಾರ್ಹತೆ: ಮೆಟ್ರಿಕ್ ಜೊತೆಗೆ ಮೂರು ವರ್ಷದ ಡಿಪ್ಲೊಮಾ (ರೇಡಿಯೊ ಹಾಗೂ ಟಿ.ವಿ. ಟೆಕ್ನಾಲಜಿ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಟೆಲಿ ಕಮ್ಯುನಿಕೇಷನ್ ಅಥವಾ ಕಂಪ್ಯೂಟರ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್).

2) ಹೆಡ್ ಕಾನ್‌ಸ್ಟೆಬಲ್ (ಎಚ್.ಸಿ.) (ರೇಡಿಯೊ ಆಪರೇಟರ್- ಆರ್.ಒ.)- 685 ಹುದ್ದೆ, ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಹಾಗೂ ಎರಡು ವರ್ಷಗಳ ಐಟಿಐ ಪ್ರಮಾಣಪತ್ರ (ರೇಡಿಯೊ ಹಾಗೂ ಟಿ.ವಿ. ಅಥವಾ ಎಲೆಕ್ಟ್ರಾನಿಕ್ಸ್)

3) ಹೆಡ್ ಕಾನ್‌ಸ್ಟೆಬಲ್ (ಎಚ್.ಸಿ.)- (ಫಿಟ್ಟರ್)- 23 ಹುದ್ದೆ, ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಹಾಗೂ ಎರಡು ವರ್ಷಗಳ ಐಟಿಐ ಪ್ರಮಾಣ ಪತ್ರ (ಎಂಜಿನ್ ಫಿಟ್ಟರ್ ಅಥವಾ ಡೀಸೆಲ್ ಮೆಕ್ಯಾನಿಕ್ ಅಥವಾ ಮೋಟಾರ್ ಮೆಕ್ಯಾನಿಕ್)

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 50

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ 

* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.

ವಿಳಾಸ: ದಿ ಡಿಐಜಿ/ಕಮಾಂಡೆಂಟ್, ಬಿಎಸ್‌ಎಫ್, ಎಸ್‌ಟಿಎಸ್ ಯಲಹಂಕ, ಬೆಂಗಳೂರು- 560 064

ಹೆಚ್ಚಿನ ಮಾಹಿತಿಗೆ http://bsf.nic.inಎನ್.ಎಚ್.ಪಿ.ಸಿ.

ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್‌ನಲ್ಲಿ (ಎನ್.ಎಚ್. ಪಿ.ಸಿ.) 180 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 7-1-2014ರಿಂದ 21-1-2014.

ಹುದ್ದೆ ಹೆಸರು: ಟ್ರೈನಿ ಎಂಜಿನಿಯರ್ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್)

ವೇತನ ಶ್ರೇಣಿ: ರೂ 20,600- 46,500

ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ (ಎಂಜಿನಿಯರಿಂಗ್/ ಟೆಕ್ನಾಲಜಿ/ ಬಿ.ಎಸ್ಸಿ. (ಎಂಜಿನಿಯರಿಂಗ್), ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ವಯೋಮಿತಿ: 30 ವರ್ಷ ದಾಟಿರಬಾರದು. 

ವಿಶೇಷ ಸೂಚನೆ: ಜಿಎಟಿಇ (ಗೇಟ್)- 2014ರ ಪರೀಕ್ಷೆಗೆ ಹಾಜರಾಗಲು ನೋಂದಣಿ ಮಾಡಿಸಿರಬೇಕು. ಅದಕ್ಕೆ ಕೊನೆಯ ದಿನಾಂಕ: 3-10-2013.

* ಜಿಎಟಿಇ ಪರೀಕ್ಷೆ 1-2-2014 ಹಾಗೂ 2-3-2014 ನಡುವೆ ನಡೆಯಲಿದೆ. ಈ ಬಗ್ಗೆ ಮಾಹಿತಿಗೆ http://gate.iitkgp.ac.in  ಸಂಪರ್ಕಿಸಿ.ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗೆ http://www.nhpcindia.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry