ಭಾನುವಾರ, ಜೂನ್ 20, 2021
20 °C

ಅಲ್ಲಲ್ಲಿ ಹೋಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೋಳಿ ಹಬ್ಬವನ್ನು ಆಚರಿಸಲು ವಾಣಿಜ್ಯ ಕೇಂದ್ರಗಳೂ, ಮಾಲ್‌ಗಳೂ ಸಜ್ಜಾಗಿವೆ. ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಮಾ.15 ಮತ್ತು 16ರಂದು ಫ್ಲೀ ಮಾರ್ಕೆಟ್‌ ಹೋಳಿ ಹಬ್ಬದ ನೆಪದಲ್ಲಿ ತೆರೆದುಕೊಳ್ಳಲಿದೆ.ಹೋಳಿಗೆ ಸಂಬಂಧಿಸಿದ ವಿವಿಧ ಸಾಮಗ್ರಗಿಳ ನಾಲ್ಕು ಬಗೆಯ ಬಜಾರ್‌ಗಳು ಎರಡೂ ದಿನ ಮಾಲ್‌ನಲ್ಲಿ ಗ್ರಾಹಕರಿಗಾಗಿ ತೆರೆದಿರುತ್ತವೆ. ಪಿಚಕಾರಿ, ಬಲೂನ್‌ ಸೇರಿದಂತೆ ಮಕ್ಕಳಿಗೆ ಪ್ರಿಯವಾದ ಹೋಳಿ ಸಾಮಗ್ರಿಗಳ ಮಳಿಗೆಗಳು, ಬಳೆಗಳು, ಪಾದರಕ್ಷೆಗಳು, ದುಪಟ್ಟಾ, ಮೆಹೆಂದಿ, ಕೈಚೀಲ, ಆಭರಣ, ಪೀಠೋಪಕರಣ, ಕರಕುಶಲವಸ್ತುಗಳು, ಭಾವಚಿತ್ರಗಳು ಹಾಗೂ ಟೀಶರ್ಟ್ ಮುಂತಾದ ಹತ್ತಾರು ಬಗೆಯ ವಸ್ತುಗಳಿರುವ ಮಳಿಗೆಗಳೂ ಇಲ್ಲಿ ಇರುತ್ತವೆ. ಇಷ್ಟೇ ಅಲ್ಲದೇ ಸಮೋಸ, ಕಚೋರಿ, ತಂಪು ಪಾನೀಯ ಹಾಗೂ ಮಸಾಲಾ ಟೀ ಮಾರಾಟ ಮಾಡುವ ಮಳಿಗೆಗಳೂ ಇರುತ್ತವೆ. ಇದೊಂದಿಗೆ ಬಿಸಿ ಬಿಸಿ ಜಿಲೇಬಿ ಮಾರುವವರೂ ಇರುತ್ತಾರೆ.ಮನರಂಜನೆಗಾಗಿ ಎರಡೂ ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ ೧೨.೩೦ರವರೆಗೆ ಹಾಗೂ ಸಂಜೆ ೫ ಗಂಟೆಯಿಂದ ೭ ಗಂಟೆಯವರೆಗೆ, ಝುಂಬಾ ಹಾಗೂ ಬಾಲಿವುಡ್ ನೃತ್ಯಗಳು ನಡೆಯಲಿವೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ೦೮೦ ೨೫೦೪ ೩೮೦೦.

ಕುಕೀಸ್‌ ಉಡುಗೊರೆ ಪೊಟ್ಟಣಹೋಳಿಯ ಶುಭಾಶಯ ಕೋರಿದ ಕಿರಿಯರಿಗೆ ಏನಾದರೂ ಉಡುಗೊರೆ ಕೊಡುವುದು ಹಿರಿಯರ ಸಂಪ್ರದಾಯ. ಹಾಗಿದ್ದರೆ ‘ಕುಕೀಮ್ಯಾನ್‌’ ಕುಕೀಸ್‌ ಉಡುಗೊರೆಯ ಪೊಟ್ಟಣಗಳನ್ನೇ ಕೊಡಬಹುದು ಎಂದು ಸಲಹೆ ನೀಡಿದೆ ಕಂಪೆನಿ.ಗರಿಗರಿಯಾದ ಈ ಕುಕೀಸ್‌ ಆಸ್ಟ್ರೇಲಿಯಾದ ಸಾಂಪ್ರದಾಯಿಕ ಬೇಕಿಂಗ್‌ ಮಾದರಿಯಲ್ಲಿ ತಯಾರಾಗಿದ್ದು, ಬರೋಬ್ಬರಿ 50 ಬಗೆಯಲ್ಲಿ ಲಭ್ಯ. ಕುಕೀಮ್ಯಾನ್‌ ಬ್ರೌನೀಸ್‌, ಐಸ್‌ಕ್ರೀಂ, ಡೋನಟ್ಸ್‌ ಮತ್ತು ಮುಫಿನ್ಸ್‌ಗಳೂ ಕುಕೀಮ್ಯಾನ್‌ ವೈವಿಧ್ಯದ ಪೊಟ್ಟಣಗಳಲ್ಲಿ ಸಿಗುತ್ತವೆ.

ಹೋಳಿ ಭೋಜನಹೊಸೂರು ರಸ್ತೆಯಲ್ಲಿರುವ ಕೀಸ್‌ ಹೋಟೆಲ್‌ ಮಾ. 17ರಂದು ವಿಶೇಷ ಮೆನುವಿನೊಂದಿಗೆ ಹಬ್ಬವನ್ನು ಆಚರಿಸಿ ಎಂದು ಗ್ರಾಹಕರನ್ನು ಆಹ್ವಾನಿಸಿದೆ. ಹೋಟೆಲ್‌ನ ಮನರಂಜನಾ ವಿಭಾಗದಲ್ಲಿ ಮಳೆ ನೃತ್ಯ, ಡಿಜೆ ಲೈವ್‌ ಮ್ಯೂಸಿಕ್‌ ಸಹ ಇರುತ್ತದೆ. ಅನಿಯಮಿತವಾದ ಆಹಾರ ಮತ್ತು ಪಾನೀಯಗಳೂ ಲಭ್ಯ.ಅಂದು ಬೆಳಿಗ್ಗೆ 11ರಿಂದ ಶುರುವಾಗುವ ಹೋಳಿ ಆಚರಣೆಗೆ ಡಿಜೆ ವಿಕ್ಕಿ ಅವರು ತಮ್ಮ ಬಾಲಿವುಡ್‌ ಮತ್ತು ದೇಸಿ ಹಾಡುಗಳ ಮೂಲಕ ರಂಗು ತುಂಬಲಿದ್ದಾರೆ. ಊಟಕ್ಕೂ ಮೊದಲು ಸಾವಯವ ಬಣ್ಣಗಳಿಂದ ಓಕುಳಿಯಾಡಿ, ಮಳೆಯಲ್ಲಿ ನೃತ್ಯ ಮಾಡಿ ಮೋಜು ಮಾಡಲೂ ಅವಕಾಶ ವಿದೆಯಂತೆ.ಉತ್ತರ ಭಾರತದ ದಹಿ ಭಲ್ಲಾ, ಕಚೋರಿ, ಸಮೋಸ, ಈರುಳ್ಳಿ ಬಜ್ಜಿ, ಅಂಬೂರ್‌ ಚಿಕನ್‌ ಬಿರಿಯಾನಿ, ಮಲಬಾರ್‌ ಫಿಶ್‌ ಕರಿ, ಮಲಾಯ್ ಕೋಫ್ತಾ, ಮಿಶ್ರ ತರಕಾರಿಗಳ ಸಾಂಬಾರು ಮೇನ್‌ ಕೋರ್ಸ್‌ನಲ್ಲಿ ಹೊಟ್ಟೆ ತುಂಬಿದರೆ, ಡೆಸರ್ಟ್‌ನಲ್ಲೂ ನಾಲ್ಕಾರು ಬಗೆಯ ಆಯ್ಕೆಗಳಿರುತ್ತವೆ.ಪ್ರತಿಯೊಬ್ಬರಿಗೂ ದರ ತಲಾ 999 ರೂಪಾಯಿ ಮತ್ತು ತೆರಿಗೆ ಅನ್ವಯ. ವಿವರಗಳಿಗೆ ಸಂಪರ್ಕಿಸಿ: 080) 3944 1000/ 9686 2015 82. ಮೂಹ್‌ ಮೀಠಾಕಾಪರ್‌ ಚಿಮ್ಣಿ ಹೋಳಿ ಹಬ್ಬದ ಪ್ರಯುಕ್ತ ವಿಶೇಷ ಖಾದ್ಯ ‘ಮೂಹ್‌ ಮೀಠಾ’ವನ್ನು ಪರಿಚಯಿಸಿದೆ. ಮಸಾಫರ್‌, ಮಲಾಯಿ ಫಿರ್ನಿ, ರಬ್ಡಿ ಮತ್ತು ಐಸ್‌ಕ್ರೀಂ ಖಾದ್ಯಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿವೆ ಎಂದು ಹೇಳಿಕೊಂಡಿದೆ ಕಾಪರ್ ಚಿಮ್ಣಿ. ಮಾ. 18ರವರೆಗೆ ಈ ವಿಶೇಷ ಖಾದ್ಯ ಸವಿಯುವ ಅವಕಾಶವಿದೆ. ಬೆಲೆ ತೆರಿಗೆ ಹೊರತುಪಡಿಸಿ ₨180. ಸ್ಥಳ–ಫೀನಿಕ್ಸ್‌ ಮಾರ್ಕೆಟ್‌, ಇನ್‌ಆರ್ಬಿಟ್‌ ಮಾಲ್‌ (ವೈಟ್‌ಫಿಲ್ಡ್‌), ಇಂದಿರಾನಗರ 100 ಅಡಿ ರಸ್ತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.