ಅಲ್ ಖೈದಾ ಮಿತ್ರ ಸಂಘಟನೆ ಕಪ್ಪು ಪಟ್ಟಿಗೆ

7

ಅಲ್ ಖೈದಾ ಮಿತ್ರ ಸಂಘಟನೆ ಕಪ್ಪು ಪಟ್ಟಿಗೆ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್):  ಅಲ್ ಖೈದಾದ  ಹೊಸ ಮಿತ್ರ ಸಂಘಟನೆ ಅನ್ಸಾರ್  ಅಲ್-ಷರಿಯಾವನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ.ಈ ಸಂಘಟನೆಯನ್ನು  ಬೆಂಬಲಿಸುವುದಾಗಲಿ ಅಥವಾ ಅದರೊಂದಿಗೆ ವ್ಯವಹಾರ ನಡೆಸುವ  ಗುಂಪುಗಳನ್ನು ನಿಷೇಧಿಸಿದೆ ಮತ್ತು ಅಂತಹವುಗಳ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದೆ.ಮೇನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಒಳಗೊಂಡಂತೆ,  ಯೆಮನ್ ಪಡೆಯ ವಿರುದ್ಧದ ಸತತ ದಾಳಿಯ ಹೊಣೆಯನ್ನು ಈ ಸಂಘಟನೆ ಹೊತ್ತಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಯೆಮನ್ ಸೈನಿಕರು ಸಾವನ್ನಪ್ಪಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry