ಮಂಗಳವಾರ, ನವೆಂಬರ್ 12, 2019
19 °C

ಅಳಂದ: ಮೂರು ನಾಲಿಗೆಯುಳ್ಳ ಕರುವಿನ ಜನನ

Published:
Updated:

ಆಳಂದ: ಮೂರು ಕಣ್ಣುವುಳ್ಳವನು ಮುಕ್ಕಣ್ಣನಾದರೆ, ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಮೂರು ನಾಲಿಗೆಯುಳ್ಳ ಕರುವೊಂದು ಜನನವಾಗಿದೆ. ಇದನ್ನು ನೋಡಲು ಗ್ರಾಮದಲ್ಲಿ ಅನೇಕರು ತೆರೆಳಿ ಕರುವನ್ನು ಕಂಡು ಸೋಜಿಗ ವ್ಯಕ್ತಪಡಿಸುತ್ತಿರುವುದು ಗಮನ ಸೆಳೆಯುತ್ತಿದೆ.ಗ್ರಾಮದ ಅಮೃತ ವಿಠಲ ಜಗದಾಳೆ ಅವರು ಇತ್ತಿಚೆಗೆ ಖರೀದಿಸಿದ ಆಕಳು ಮೂರು ನಾಲಿಗೆಯುಳ್ಳ ಕರುವಿಗೆ ಶುಕ್ರವಾರ ಜನ್ಮ ನೀಡಿದೆ. ಕರು ಆರೋಗ್ಯವಾಗಿದ್ದು, ಅದರ ಸಹಜ ಚಲನ ವಲನಗಳು ಮಾಡುತ್ತಿದೆ. ಆದರೆ ಜನಿಸಿದ ಎರಡು ದಿನವಾದರೂ ಕರುವಿಗೆ ತಾಯಿ ಕೆಚ್ಚಲಿನಿಂದ ಹಾಲು ಕುಡಿಯಲು ಸಾಧ್ಯವಾಗುತ್ತಿಲ್ಲ. ಇದು ರೈತನಿಗೆ ಗಾಬರಿ ತಂದಿದೆ.ಸುಂದರವಾದ ಗಂಡು ಕರುವಿಗೆ ಮೇಲಿನಿಂದ ಹಾಲು ಕುಡಿಸಲಾಗುತ್ತಿದೆ. ನಾಲಿಗೆಯು ಒಂದುಕೊಂದು ಅಂಟಿರುವುದರಿಂದ ಇದಕ್ಕೆ ಪಶುವೈದ್ಯರಿಗೆ ತೊರಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಬದುಕಬಹುದು ಎಂದು ಮನೆಯವರು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಈಗಾಗಲೇ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ. ಸಂಜಯ ರೆಡ್ಡಿ `ಪ್ರಜಾವಾಣಿ'ಯೊಂದಿಗೆ ಮಾತನಾಡಿ ಅನುವಂಶೀಯ ವ್ಯತ್ಯಾಸದಿಂದ ಹೀಗಾಗುತ್ತದೆ. ಕರುವಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಬದುಕುಳಿಸಬಹುದು ಎಂದರು.

ಪ್ರತಿಕ್ರಿಯಿಸಿ (+)