ಅಳಗಿರಿ ಕಿವಿ ಹಿಂಡಿದ ಕರುಣಾನಿಧಿ

7

ಅಳಗಿರಿ ಕಿವಿ ಹಿಂಡಿದ ಕರುಣಾನಿಧಿ

Published:
Updated:

ಚೆನ್ನೈ (ಪಿಟಿಐ): ಪಕ್ಷದ ನಾಯಕತ್ವ­ಕ್ಕಾಗಿ  ಪುತ್ರರಲ್ಲಿ ನಡೆದಿರುವ ಕಚ್ಚಾಟ­ದಿಂದ ಬೇಸತ್ತಿರುವ ಡಿಎಂಕೆ ವರಿಷ್ಠ ಎಂ.ಕೆ. ಕರುಣಾನಿಧಿ ಅವರು ಮಂಗಳ­ವಾರ  ಹಿರಿಯ ಪುತ್ರ ಅಳಗಿರಿ ಅವರಿಗೆ ನಯವಾದ ಎಚ್ಚರಿಕೆ ನೀಡಿದ್ದಾರೆ.ಮುಂಬರುವ ಲೋಕಸಭಾ ಚುನಾ­ವಣೆ­ಯಲ್ಲಿ ಡಿಎಂಕೆ ಮತ್ತು ಚಿತ್ರನಟ ವಿಜಯ­­ಕಾಂತ್ ನೇತೃತ್ವದ (ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ) ಡಿಎಂಡಿಕೆ ನಡುವಣ ಮೈತ್ರಿ  ಕುರಿತು ಅಳಗಿರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಪಕ್ಷದ ನಿರ್ಧಾರವನ್ನು ವಿರೋಧಿ­ಸುವವರು ಯಾರೇ ಆಗಲಿ ಅಂಥವ­ರನ್ನು ಪಕ್ಷದಿಂದ ಉಚ್ಚಾಟಿಸ­ಲಾಗು­ವುದು’ ಎಂದು ಅವರು ತಮ್ಮ ಪುತ್ರನಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.‘ಒಂದೊಮ್ಮೆ ಅಳಗಿರಿ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರೆ ಅದು ಖಂಡನೀಯ. ಪಕ್ಷದ ಶಿಸ್ತನ್ನು ಉಲ್ಲಂಘಿ­ಸುವವರು ಯಾರೇ ಆಗಿರಲಿ ಅಂಥ­ವರ ವಿರುದ್ಧ ಶಿಸ್ತುಕ್ರಮ ಜರುಗಿ­ಸ­ಲಾಗು­ವುದು. ಪಕ್ಷದ  ಸದಸ್ಯತ್ವ ರದ್ದು­ಗೊಳಿ­ಸ­ಲಾಗುವುದು’ ಎಂದಿದ್ದಾರೆ. ಡಿಎಂಡಿಕೆ ಜತೆ ಮೈತ್ರಿಯನ್ನು ಸ್ಟಾಲಿನ್‌ ಸ್ವಾಗ­ತಿ­ಸಿದರೆ, ಅಳಗಿರಿ ವಿರೋಧಿಸಿದ್ದರು.ಕರುಣಾನಿಧಿ ಅವರ ಉತ್ತರಾಧಿ­ಕಾರಿ ಯಾರು ಎಂಬ ಬಗ್ಗೆ  ಅವರ ಪುತ್ರ­ರಾದ ಅಳಗಿರಿ ಮತ್ತು ಸ್ಟಾಲಿನ್ ನಡು­ವಿನ ಪೈಪೋಟಿಯೇ ಪಕ್ಷದಲ್ಲಿಯ ಈ ಗೊಂದಲಗಳಿಗೆ ಕಾರಣ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry