ಗುರುವಾರ , ನವೆಂಬರ್ 21, 2019
23 °C

ಅಳವಂಡಿ: 10 ಜನರಿಗೆ ಕಡಿದ ಹುಚ್ಚು ನಾಯಿ

Published:
Updated:

ಕೊಪ್ಪಳ: ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಹುಚ್ಚು ನಾಯಿ ಕಡಿದ ಪರಿಣಾಮ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ.ಈ ಪೈಕಿ ಮಹಿಳೆಯೊಬ್ಬಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಮನೆಯಂಗಳದಲ್ಲಿ ಮಲಗಿದ್ದ ಕೆಲವರಿಗೆ ಕಡಿದಿರುವ ಹುಚ್ಚು ನಾಯಿ, ಹೊಲಕ್ಕೆ ಹೊರಟಿದ್ದ ಬಸವಣ್ಣೆಮ್ಮ ಹೊರಪ್ಯಾಟಿ (55) ಎಂಬ ಮಹಿಳೆಯ ಎಡಗಾಲು ಮತ್ತು ಬಲಗೈಗೆ ಕಚ್ಚಿದೆ.ಈ ಘಟನೆಯಲ್ಲಿ ಗಾಯಗೊಂಡವರ ಪೈಕಿ ಗೂಳಪ್ಪ ಹೋರಿ, ಮಂಜುನಾಥ, ಸಾಗರ್, ಶಫಿ ಎಂಬುವವರಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.ಆದರೆ, ತೀವ್ರವಾಗಿ ಗಾಯಗೊಂಡಿರುವ ಬಸವಣ್ಣೆಮ್ಮಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಳಿದ ಗಾಯಾಳುಗಳ ವಿವರ ಲಭ್ಯವಾಗಿಲ್ಲ.ಔಷಧಿ ಕೊರತೆ: ನಾಯಿ ಕಚ್ಚಿದ ಸಂದರ್ಭದಲ್ಲಿ ನೀಡಲಾಗುವ ಔಷಧಿ ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇಲ್ಲದೇ ಇರುವುದರಿಂದ ಗಾಯಾಗಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತು ಎಂದು ಗ್ರಾಮಸ್ಥರೊಬ್ಬರು       ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)