ಅಳಿಲನ್ನು ಹೋಲುತ್ತಿದ್ದ ಮಾನವನ ಪೂರ್ವಿಕರು!

7

ಅಳಿಲನ್ನು ಹೋಲುತ್ತಿದ್ದ ಮಾನವನ ಪೂರ್ವಿಕರು!

Published:
Updated:

ವಾಷಿಂಗ್ಟನ್ (ಪಿಟಿಐ): ಚಿಕ್ಕ ಪ್ರಾಣಿಯಂತೆ ಇದ್ದ ಮಾನವನ ಪೂರ್ವಜರು ಬಹುತೇಕ ಅಳಿಲನ್ನು ಹೋಲುತ್ತಿದ್ದರು ಎಂದು ಹೊಸ ಸಂಶೋಧನೆಯೊಂದು ಹೇಳಿದೆ.ತೀರಾ ಇತ್ತೀಚೆಗೆ ದೊರೆತ ಜಗತ್ತಿನ ಅತ್ಯಂತ ಪ್ರಾಚೀನ ಸಸ್ತನಿಗಳಾದ ಮಂಗಗಳ ಪಳೆಯುಳಿಕೆಗಳ ಅಧ್ಯಯನದಿಂದ ವಿಜ್ಞಾನಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಚಿಕ್ಕ ಮೂಳೆ ಮತ್ತು ಹಲ್ಲು, ದವಡೆಗಳ ಅಧ್ಯಯನದಿಂದ ಮಂಗಗಳ ಪೂರ್ವಿಕರ ಗಾತ್ರ ಚಿಕ್ಕ ಅಳಿಲಿನಷ್ಟೇ ಇತ್ತು.ಅವು ಮರದಿಂದ ಮರಗಳನ್ನು ಏರುತ್ತ ಹಣ್ಣುಗಳನ್ನು ತಿನ್ನುತ್ತಿದ್ದವು. ಅಂದಿನ ಈ ಚಿಕ್ಕ ಮಂಗಗಳ ಪಾದದ ಕೀಲು, ಸಂದು ಜೋಡಣೆ ಕೂಡಾ ಮರದಲ್ಲಿರುವ ಇಂದಿನ ಸಸ್ತನಿಗಳನ್ನೇ ಹೋಲುತ್ತವೆ ಎನ್ನುತ್ತಾರೆ ಯೇಲ್ ವಿಶ್ವವಿದ್ಯಾಲಯದ ಪಳೆಯುಳಿಕೆ ಶಾಸ್ತ್ರಜ್ಞ ಸ್ಟೀಫನ್ ಚೆಸ್ಟರ್.ಈ ಪಳೆಯುಳಿಕೆಗಳು ಮಂಗಳಗಳ ಉಗಮದ ನಂತರ ಮೊದಲ ನೂರು ವರ್ಷದ ಅವಧಿಯಲ್ಲಿ ಆದ ಬದಲಾವಣೆ ಮತ್ತು  ಮಂಗನಿಂದ ಮಾನವ ಎಂಬ ವಿಕಾಸವಾದಕ್ಕೆ ಪುಷ್ಟಿ ನೀಡುತ್ತವೆ.  ಕೇವಲ 1.3 ಔನ್ಸ್ ತೂಗುತ್ತಿದ್ದ ಈ ಸಸ್ತನಿಗಳು(ಪುರ‌್ಗಾಟೋರಿಸ್) ಇಂದಿನ ಮಡಗಾಸ್ಕರ್ ದ್ವೀಪದಲ್ಲಿ ಕಾಣಸಿಗುವ ಮರಗಳಲ್ಲಿ ವಾಸಿಸುವ ಕಾಡುಪಾಪದಂತಹ ಲೀಮರ್ ಪ್ರಾಣಿಯನ್ನು ಹೋಲುತ್ತಿದ್ದವು. 600 ವರ್ಷಗಳ ನಂತರ ಇವು ಮರಗಳನ್ನು ತೊರೆದು ನೆಲಕ್ಕೆ ಕಾಲಿಟ್ಟಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry