ಮಂಗಳವಾರ, ಏಪ್ರಿಲ್ 13, 2021
31 °C

ಅಳಿವಿನಂಚಿನ ಭಾಷೆಗಳ ರಕ್ಷಣೆಗೆ ಗೂಗಲ್ ಮುಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಕ್ಸಿಕೊ (ಎಎಫ್‌ಪಿ): ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಮೂರು ಸಾವಿರಕ್ಕೂ ಅಧಿಕ ಭಾಷೆಗಳನ್ನು ರಕ್ಷಿಸಲು ಗೂಗಲ್ ಸಂಸ್ಥೆ ಯೋಜನೆ ರೂಪಿಸುತ್ತಿದೆ.ಅದಕ್ಕಾಗಿ ಆನ್‌ಲೈನ್ ಮೂಲಕ ಭಾಷಾ ಪ್ರೇಮಿಗಳಿಂದ ತಮ್ಮ ಸಂಗ್ರಹದಲ್ಲಿರುವ ಅಳಿವಿನಂಚಿನ ಭಾಷೆಗಳ ಮಾಹಿತಿಯನ್ನು  www.endangeredlanguages.com ಜಾಲತಾಣದ ಮೂಲಕ ಹಂಚಿಕೊಳ್ಳುವಂತೆ ಕರೆ ನೀಡಿದೆ.ಅಳಿವಿನಂಚಿನ ಭಾಷೆ ಸಂರಕ್ಷಣೆಗೆ ಆರಂಭಿಸಿರುವ ಜಾಲತಾಣ ಒಂದು ಮುಕ್ತ ವೇದಿಕೆ. ಭಾಷೆ ಪ್ರೀತಿ ಇರುವ ಹಾಗೂ ಸಂಪನ್ಮೂಲಗಳಿರುವ ಯಾರು ಬೇಕಾದರೂ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಎಂದು ಗೂಗಲ್‌ನ ಮೆಕ್ಸಿಕೊ ಮಾರ್ಕೆಂಟಿಗ್ ವಿಭಾಗದ ಮುಖ್ಯಸ್ಥ ಮಿಗುಯೆಲ್ ಅಲ್ಬಾ ಮನವಿ ಮಾಡಿದ್ದಾರೆ.ಜಗತ್ತಿನಲ್ಲಿ ಪ್ರಸ್ತುತ 7000 ಭಾಷೆಗಳು ಬಳಕೆಯಲ್ಲಿವೆ. ಶತಮಾನದ ಕೊನೆಯ ಹೊತ್ತಿಗೆ ಇದರಲ್ಲಿನ ಅರ್ಧದಷ್ಟು ಭಾಷೆಗಳು ಅಳಿದುಹೋಗುವ ಸಾಧ್ಯತೆ ಇದೆ~ ಎಂದು ಅಲ್ಬಾ ಆತಂಕ ವ್ಯಕ್ತಪಡಿಸಿದ್ದಾರೆ.`ಅಳಿವಿನಂಚಿನ ಭಾಷೆಗಳ ಕುರಿತು ಮಾಹಿತಿ, ಚಿತ್ರಗಳು, ದೃಶ್ಯ, ಶ್ರಾವ್ಯ,  ವಿನಿಮಯ ಮಾಡಿಕೊಳ್ಳುವುದರಿಂದ ಆ ಭಾಷೆಗೆ ಹೆಚ್ಚಿನ ಬಲ ತುಂಬಬಹುದು~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಮೆರಿಕದ `ನವಾಜೊ~, ಸ್ಪೇನ್‌ನ `ಅರ್ಗೋನೀಸ್~, ಭಾರತದ `ಕೋರೊ~ ಮತ್ತು ತಾಂಜಾನಿಯಾದ `ಬುರಂಗೆ~ ಭಾಷೆಗಳನ್ನು ಅತಿ ಕಡಿಮೆ ಜನ ಮಾತನಾಡುತ್ತಿದ್ದಾರೆ. ಹಾಗಾಗಿ ನಾವು ಕೈಗೊಂಡಿರುವ ಈ  ಕ್ರಮದಿಂದ  ಇಂತಹ ಹಲವು ಭಾಷೆಗಳು ಶಕ್ತಿಯುತವಾಗುತ್ತವೆ ಎಂದು ಅವರು ಹೇಳಿದ್ದಾರೆ. `ಒಂದು ಭಾಷೆ ಅಳಿಯಲು, ಆ ಭಾಷೆಯ ಬಳಕೆದಾರರೇ ಕಾರಣರಾಗಿರುತ್ತಾರೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿ ಆ ಭಾಷೆಯೊಳಗಿನ ಧನಾತ್ಮಕ ಶಕ್ತಿಯನ್ನು ಬಳಸಿಕೊಳ್ಳುವ ಬದಲು ಅನ್ಯ ಭಾಷೆಗಳತ್ತ ಜನರು ಮುಖ ಮಾಡುತ್ತಾರೆ~ ಎಂದು ಭಾಷೆಗಳ ಅಳಿವು ಕುರಿತು ಮಾನವಶಾಸ್ತ್ರಜ್ಞ ಫ್ರಾನ್ಸಿಸ್ಕೊ ಬ್ಯಾರಿಗಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.