ಭಾನುವಾರ, ಆಗಸ್ಟ್ 18, 2019
24 °C

ಅಳಿವಿನ ಅಂಚಿನಲ್ಲಿ ಕೊಂಕಣಿ ಕಲೆ: ನಾಡಿಸೋಜ

Published:
Updated:

ಮಂಗಳೂರು: ಒಂದು ಕಾಲದಲ್ಲಿ ಕೊಂಕಣಿ ಭಾಷೆ ಶ್ರೀಮಂತವಾಗಿತ್ತು. ನವಾಯತ ಕೊಂಕಣಿ ಭಾಷೆಯಲ್ಲಿ ಮಹಾ ಕಾವ್ಯಗಳನ್ನೇ ಬರೆಯಲಾಗಿತ್ತು. ಕುಡುಬಿ ಕೊಂಕಣಿಯಲ್ಲಿ ರಾಮಾಯಣ ಕಾವ್ಯ ಬರೆಯಲಾಗಿತ್ತು. ಮರಾಠಿಯ ಸಂತ ಜ್ಞಾನೇಶ್ವರ ಕೃತಿಗಳನ್ನೂ ಕೊಂಕ ಣಿಗೆ ಭಾಷಾಂತರಿಸಲಾಗಿತ್ತು. ಆದರೆ ಕಾಲಾನುಕ್ರಮದಲ್ಲಿ ತನ್ನ ಅಸ್ತಿತ್ವ ಕ್ಕಾಗಿಯೇ ಕೊಂಕಣಿ ಭಾಷೆ ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಸಾಹಿತಿ ನಾ ಡಿಸೋಜ ಹೇಳಿದರು.ಕೊಂಕಣಿ ಲೇಖಕ ಪೌಲ್ ಮೊರಾಸ್ ಬರೆದಿರುವ ಜನಪದ ಪ್ರಕಾರದ ಕುರಿತ ವಿಮರ್ಶಾತ್ಮಕ ಲೇಖನಗಳ ಸಂಗ್ರಹ- `ಖೇಲ್ ರಾಜವ್' ಪುಸ್ತಕವನ್ನು ಅವರು ಭಾನುವಾರ ಮಿಲಾಗ್ರಿಸ್ ಸಭಾಂಗಣ ದಲ್ಲಿ  ಅನಾವರಣಗೊಳಿಸಿ ಅವರು        ಮಾತ ನಾಡಿದರು.

ಬಹುಶಃ ಬೇರೆ ಯಾವುದೇ ಭಾಷೆ ತನ್ನ ಅಸ್ತಿತ್ವಕ್ಕಾಗಿ ಇಷ್ಟೊಂದು ಹೋರಾಟ ನಡೆಸಿರಲಿಕ್ಕಿಲ್ಲ. ಪೋರ್ಚುಗೀಸರ ದಾಳಿ ಯಿಂದಾಗಿ ಕೊಂಕಣಿ ರಂಗಭೂಮಿ ಕಲೆಗಳು ವಿನಾಶದ ಅಂಚಿಗೆ ಬಂದಿದ್ದರೂ ಗೋವಾದಲ್ಲಿ ಜನ ಸಾಮಾನ್ಯರೇ ಅದನ್ನು ಬೆಳೆಸಿದರು.

ಆದರೆ ಆಧುನಿಕತೆಯ ಭರಾ ಟೆಯಲ್ಲಿ ಹಲವಾರು ಕಲಾ ಪ್ರಕಾರಗಳು ಅಳಿವಿನಂಚಿಗೆ ಸರಿಯುತ್ತಿವೆ ಎಂದು ಅವರು ವಿಷಾದಿಸಿದರು.

ಲೇಖಕ ಪೌಲ್ ಮೊರಾಸ್, ಪುಸ್ತಕ ಪ್ರಕಾಶನದ ವೇಳೆ ತಾವು ಎದುರಿಸಿದ ಕಷ್ಟಗಳನ್ನು ವಿವರಿಸಿದರು.  ಸಂತ ಅಲೋಶಿಯಸ್ ಕಾಲೇಜು ಇಂಗ್ಲಿಷ್ ಪ್ರಾಧ್ಯಾಪಕ ಆಲ್ವಿನ್ ವಿನ್ಸೆಂಟ್ ಡಿ'ಸೋಜ ಕೃತಿ ಪರಿಚಯಿಸಿದರು. ರಾಕ್ಣೊ ಕೊಂಕಣಿ ಪತ್ರಿಕೆ ಸಂಪಾದಕ ಫ್ರಾನ್ಸಿಸ್ ರಾಡ್ರಿಗಸ್,  ಅಖಿಲ ಭಾರತ ಕೊಂಕಣಿ ಪರಿಷತ್ ಕಾರ್ಯಾಧ್ಯಕ್ಷ ಗೋಕುಲ್ ದಾಸ್ ಪ್ರಭು, ವಿಶ್ವ ಕೊಂಕಣಿ ಕೇಂದ್ರ ಪರಿಷತ್ ಅಧ್ಯಕ್ಷ ಬಸ್ತಿ ವಾಮನ್ ಶೆಣೈ, `ರಚನಾ' ಅಧ್ಯಕ್ಷ ಐವನ್ ಡಿ'ಸೋಜ ಉಪಸ್ಥಿತರಿದ್ದರು.

Post Comments (+)