ಅಳಿವಿನ ಅಂಚಿನಲ್ಲಿ ಸಾಗರ ಸಂಪತ್ತು

ಗುರುವಾರ , ಜೂಲೈ 18, 2019
29 °C

ಅಳಿವಿನ ಅಂಚಿನಲ್ಲಿ ಸಾಗರ ಸಂಪತ್ತು

Published:
Updated:

ವಾಷಿಂಗ್ಟನ್ (ಎಪಿ): ವಿಶ್ವದ ಬಹುತೇಕ ಸಾಗರಗಳ ಸ್ಥಿತಿಗತಿ ನಿರೀಕ್ಷೆಗಿಂತಲೂ ವೇಗವಾಗಿ ಕ್ಷೀಣಿಸುತ್ತಿರುವ ಆತಂಕಕಾರಿ ಅಂಶವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.ಹವಾಮಾನ ವೈಪರೀತ್ಯ, ಹಿಮ ಕರುಗುವಿಕೆ, ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಳ, ಮಾಲಿನ್ಯ, ಮೀನುಗಾರಿಕೆಯಂತಹ ಮಾನವ ನಿರ್ಮಿತ ಸಮಸ್ಯೆಗಳಿಂದ ಸಾಗರ ಸಂಪತ್ತು ನಶಿಸುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ.ವಿಜ್ಞಾನಿಗಳ ತಂಡ ಕಡಲುಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ತಯಾರಿಸಿದ ವರದಿಯನ್ನು ಮಂಗಳ ವಾರ ವಿಶ್ವಸಂಸ್ಥೆಗೆ ಸಲ್ಲಿಸಲಾಯಿತು. ಸಸ್ಯ ಹಾಗೂ ಪ್ರಾಣಿ ಸಂಕುಲ, ಹವಳ ದ್ವೀಪಗಳು ಅಪಾಯ ಎದುರಿಸುತ್ತಿವೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಅಲೆಕ್ಸ್ ರೋಜರ್ ಆತಂಕ ವ್ಯಕ್ತಪಡಿಸಿದ್ದಾರೆ.ಹಿಂದೂ ಮಹಾಸಾಗರದಲ್ಲಿರುವ ಸಾವಿರ ವರ್ಷ ಹಳೆಯ ಹವಳ ಹಾಸು ಬಹುತೇಕ ಹಾನಿಗೆ ಒಳಗಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ಸಾಗರಗಳ ಶ್ರೀಮಂತಿಕೆ ನಶಿಸಿ ಬರಡಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.ವರ್ಷಾಂತ್ಯದಲ್ಲಿ ಬ್ರಿಟನ್‌ನಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ತಜ್ಞರ ಸಭೆಯಲ್ಲಿ ವಿಶ್ವದ ಎಲ್ಲ ಸಾಗರಗಳ ಸ್ಥಿತಿಗತಿ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry