ಅಳುತ್ತಿರುವ ಮಗುವನ್ನು ಕರೆದುಕೊಂಡು ಹೊರಗೆ ಹೋಗಿ: ಭಾಷಣದ ನಡುವೆ ಸಿಡುಕಿದ ಟ್ರಂಪ್

ವಾಷಿಂಗ್ಟನ್: ಮಗುವಿನ ಅಳು ತನ್ನ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ಕೋಪಗೊಂಡ ಅಮೆರಿಕದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾಷಣ ಕೇಳಲು ನೆರೆದಿದ್ದ ಸಭೆಯಿಂದ ಅಮ್ಮ ಮತ್ತು ಮಗುವನ್ನು ಹೊರಕಳಿಸಿದ ಘಟನೆ ವರದಿಯಾಗಿದೆ.
ವರ್ಜೀನಿಯಾದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಮಗು ಅಳಲು ಆರಂಭಿಸಿದೆ. ಆಗ ಟ್ರಂಪ್ ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಮಗುವಿನ ಅಳು ಕೇಳುವುದು ಕೂಡ ಖುಷಿ ಎಂದು ಹೇಳಿದ್ದರು. ಆದರೆ ಸ್ಪಲ್ಪ ಹೊತ್ತಾದರೂ ಮಗು ಅಳು ನಿಲ್ಲಿಸದೇ ಇದ್ದಾಗ, ಸಿಡುಕಿದ ಟ್ರಂಪ್ ನಿಮ್ಮ ಮಗುವನ್ನು ಕರೆದುಕೊಂಡು ಹೊರಗೆ ಹೋಗಿ ಎಂದು ಮಗುವಿನ ಅಮ್ಮನಿಗೆ ಆದೇಶಿಸಿದ್ದಾರೆ.
ಟ್ರಂಪ್ ಅವರ ಈ ವರ್ತನೆ ಬಗ್ಗೆ ರಿಪಬ್ಲಿಕನ್ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.