ಶನಿವಾರ, ಮೇ 21, 2022
23 °C

ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗೊಳ್ಳಿ (ಬೈಂದೂರು): ದೀರ್ಘ ಕಾಲದಿಂದ ಶೋಷಣೆಗೊಳಗಾಗಿ, ಅವಕಾಶ ವಂಚಿತವಾದ ಸಮುದಾಯಗಳು ಪ್ರಗತಿ ಸಾಧಿಸಿ ಸಮಾಜದ ಪ್ರಧಾನ ವಾಹಿನಿಗೆ ಸೇರ್ಪಡೆಯಾಗಲು ಶಿಕ್ಷಣವೇ ಮೆಟ್ಟಿಲು ಎಂದು ಕುಂದಾಪುರ ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಮಾಣಿ ಗೋಪಾಲ ಹೇಳಿದರು.  ಇಲ್ಲಿನ ಶಾರದಾ ಮಂಟಪದಲ್ಲಿ ಸ್ಥಳೀಯ ಬಿಲ್ಲವ ಯಾನೆ ಈಡಿಗ ಸಂಘದ ಆಶ್ರಯದಲ್ಲಿ ಹೆಮ್ಮಾಡಿಮನೆ ರಾಮ ಪೂಜಾರಿ ಸ್ಮರಣಾರ್ಥ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಿಸಲು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದ ನಾರಾ ಯಣ ಗುರುಗಳು ಶಿಕ್ಷಣದ ಮಹತ್ವವನ್ನು ಪ್ರಬಲ ವಾಗಿ ಪ್ರತಿಪಾದಿಸಿದ್ದರು. ಸಂಪತ್ತು ಶಾಶ್ವತವಲ್ಲ; ಆದರೆ ಶಿಕ್ಷಣ ಶಾಶ್ವತ ಮತ್ತು ವ್ಯಕ್ತಿಯ ಉನ್ನತಿಯ ಸಾಧನ ಎಂದು ಬೋಧಿಸಿದ್ದರು ಎಂದು ಅವರು ಹೇಳಿ ದರು.ಗ್ರಾಮ ಪಂಚಾಯಿತಿ ಸದಸ್ಯ ಬಿ. ರಾಘವೇಂದ್ರ ಪೈ, ನೇರಳಕಟ್ಟೆ ಭಾಸ್ಕರ ಶೆಟ್ಟಿ, ಸಂಘ ದ ಗೌರ ವಾಧ್ಯಕ್ಷ ಲಕ್ಷ್ಮಣ ಪೂಜಾರಿ ಇದ್ದರು. ಕಾರ್ಯದರ್ಶಿ ಮಹೇಶ ಪೂಜಾರಿ ಸ್ವಾಗತಿಸಿ, ಅಧ್ಯಕ್ಷ ಗಣೇಶ ಪಿ. ಗಂಗೊಳ್ಳಿ ಪ್ರಸ್ತಾವಿಕ ಮಾತು ಗಳನ್ನಾಡಿದರು. ಗಂಗಾಧರ ಬಾಬು ನಿರೂಪಿಸಿ ವಂದಿಸಿದರು.

ಮಾದಕ ವಸ್ತು ಪರಿಣಾಮ: ವಿಚಾರ ಸಂಕಿರಣ ನಾಳೆ

ಉಡುಪಿ: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆ ಉಡುಪಿ, ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆ ಉದ್ಯಾವರ, ರೋಟರಿ ಕ್ಲಬ್ ಉದ್ಯಾವರ ಇವರ ಸಹಯೋಗದಲ್ಲಿ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ವಿಚಾರ ಸಂಕಿರಣ ಉದ್ಯಾವರದ ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.ಜಿಲ್ಲಾಪಂಚಾಯಿತಿ ಉಪಕಾರ್ಯದರ್ಶಿ ಡಿ. ಪ್ರಾಣೇಶ್ ರಾವ್ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ.  ಉದ್ಯಾವರ ಟ್ರಿನಿಟಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಾನ್ ಎಂ.ಡಿ ಸೋಜ ಅಧ್ಯಕ್ಷತೆ ವಹಿಸುವರು.ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಭಾಗವಹಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.