ಅವತಾರ್ ಲಿಥ್‌ಗೆ ಪಂಜಾಬ್ ರತ್ನ ಪ್ರಶಸ್ತಿ

7

ಅವತಾರ್ ಲಿಥ್‌ಗೆ ಪಂಜಾಬ್ ರತ್ನ ಪ್ರಶಸ್ತಿ

Published:
Updated:

ಲಂಡನ್ (ಪಿಟಿಐ): ಏಷಿಯನ್ ರೇಡಿಯೋ ಮತ್ತು ಇಂಗ್ಲೆಂಡಿನ ದೂರದರ್ಶನ ಕ್ಷೇತ್ರಕ್ಕೆ  ನೀಡಿದ ಮಹೋನ್ನತ ಕೊಡುಗೆಗಾಗಿ ಅನಿವಾಸಿ ಭಾರತೀಯ ಅವತಾರ್ ಲಿಥ್ ಅವರಿಗೆ ಸೋಮವಾರ ಇಲ್ಲಿ  `ಪಂಜಾಬ್ ರತ್ನ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಿಶ್ವ ಪಂಜಾಬಿ ಸಂಘಟನೆಯು (ಐರೋಪ್ಯ ವಿಭಾಗ) ಆಯೋಜಿಸಿದ್ದ ವಾರ್ಷಿಕ ಸಮಾರಂಭದಲ್ಲಿ ಸನ್‌ರೈಸ್ ರೇಡಿಯೋ ಗುಂಪಿನ ಸಂಸ್ಥಾಪಕ ನಿರ್ದೇಶಕರಾದ ಲಿಥ್ ಅವರಿಗೆ ಬ್ರಿಟನ್ ನ ಅಂತರರಾಷ್ಟ್ರೀಯ ಅಭಿವೃದ್ಧಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಸದ ಆ್ಯಂಡ್ರೂ ಮೈಕಲ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

 

9.60 ಕೋಟಿ ಅಮೆರಿಕನ್ ಡಾಲರ್ ಸಂಪತ್ತಿನ ಒಡೆಯರಾಗಿರುವ ಲಿಥ್ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಏಷ್ಯಾಮೂಲದ ಪ್ರಭಾವಶಾಲಿ 20 ಜನರಲ್ಲಿ ಒಬ್ಬರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಿಥ್ ಅವರು ಈವರೆಗೆ ಪ್ರೇಕ್ಷಕರಿಂದ ನನಗೆ ಅನೇಕ ಪ್ರಶಸ್ತಿಗಳು ಬಂದಿವೆ. ಆದರೆ `ಯಾವುದೇ ಸಮುದಾಯದ ಮನ್ನಣೆ ಎನ್ನುವುದು ತುಂಬಾ ಮುಖ್ಯ~ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry