ಅವತಿ ರಸ್ತೆ ದುರಸ್ತಿಗೆ ಆಗ್ರಹ: ಧರಣಿ ; ಪ್ರತಿಭಟನೆ

7

ಅವತಿ ರಸ್ತೆ ದುರಸ್ತಿಗೆ ಆಗ್ರಹ: ಧರಣಿ ; ಪ್ರತಿಭಟನೆ

Published:
Updated:

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಅವತಿ ಮತ್ತು ದಾನಿಹಳ್ಳಿ ಸುತ್ತಮುತ್ತಲ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಜಕ್ಕನಹಳ್ಳಿ, ಅವತಿ ಕ್ರಾಸ್ ಬಳಿ ಗಂಟೆಗೂ ಹೆಚ್ಚು ಕಾಲ ಬುಧವಾರ ರಸ್ತೆ ತಡೆ ನಡೆಸಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು.ಈ ಭಾಗದ ರಸ್ತೆಗಳನ್ನು ಒಂದು ವಾರದೊಳಗೆ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗದಿದ್ದರೆ ಮೂಡಿ ಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ನಿವಾಸದ ಎದುರು ಪ್ರತಿಭಟನೆ, ಸಂಬಂಧಿಸಿದ ಇಲಾಖೆ ಕಚೇರಿಗೆ ಬೀಗಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗು ತ್ತದೆ  ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.ಶಾಸಕರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಸ್ತೆ ದುರಸ್ತಿಗೆ ಗುದ್ದಲಿಪೂಜೆ ನಡೆಸಿ ಕಾಲಹರಣ ಮಾಡದೆ ಕೂಡಲೇ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣೇಗೌಡ, ಹಲವಾರು ವರ್ಷ ಗಳಿಂದ ಜಕ್ಕನಹಳ್ಳಿ,ಆವತಿ, ದಾನಿಹಳ್ಳಿ, ಮಾಕೋಡು ಸುತ್ತಮುತ್ತಲ ರಸ್ತೆಗಳು ಗುಂಡಿಬಿದ್ದಿದ್ದರೂ ಅವುಗಳನ್ನು ರಿಪೇರಿ ಮಾಡಿಸುವ ಕೆಲಸಕ್ಕೆ ಈ ಭಾಗದ ಶಾಸಕರು ಮುಂದಾಗಿಲ್ಲ. ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ಸಲ್ಲಿಸಲಾಯಿತು. ಕೇವಲ ಅಭಿವೃದ್ಧಿಗೆ ಗುದ್ದಲಿಪೂಜೆ ನಡೆಯಿತೇ ಹೊರತು ಕೆಲಸ ಆರಂಭಗೊಳ್ಳಲಿಲ್ಲ ಎಂದು ಟೀಕಿಸಿದರು.ರಸ್ತೆಗೆ ಅಡ್ಡಲಾಗಿರುವ ಮರಗಳನ್ನು ತೆರವು ಗೊಳಿಸಬೇಕು. ರಸ್ತೆ ವಿಸ್ತರಿಸಿ, ಚರಂಡಿ ನಿರ್ಮಿಸಬೇಕು. ಆವತಿ ಶಾಲೆ ಪಕ್ಕದಲ್ಲಿರುವ ಮದ್ಯದ ಅಂಗಡಿಯನ್ನು ಸ್ಥಳಾಂತರಿ ಸಬೇಕು ಎಂದರು.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿ , ಅಭಿವೃದ್ಧಿ ಕೆಲಸದಲ್ಲಿ ಶಾಸಕರು ಪಕ್ಷಪಾತ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ತಿಳಿಸಿದರು.ಅವತಿ ಸುತ್ತಮುತ್ತಲ ಪಂಚಾಯಿತಿಯಲ್ಲಿ ಉದ್ಯೋಗಖಾತರಿ ಯೋಜನೆಯಡಿ ಕಳಪೆ ಕಾಮಗಾರಿಗಳು  ನಡೆದಿವೆ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry