ಸೋಮವಾರ, ಮೇ 10, 2021
21 °C

`ಅವಧಿಯಲ್ಲ, ಸೇವೆ ಮುಖ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಅವಧಿಗಿಂತ ಸೇವೆಯ ಮಾದರಿ ಮುಖ್ಯ ಎಂದು ತಹಸೀಲ್ದಾರ ಬಾಲರಾಜ ದೇವರಖಾದ್ರ ಹೇಳಿದರು.ಈಚೆಗೆ ನಿವೃತ್ತರಾದ ಉಪನೋಂದಣಿ ಅಧಿಕಾರಿ ಶಂಕರರಾವ ಮುಗಳಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ, ಮಾತನಾಡಿದರು.ಸರ್ಕಾರಿ ಸೇವೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳದೆ ಎಲ್ಲರ ಜೊತೆ  ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ಅಧಿಕಾರಿ ಎಲ್ಲರ ಮನಸ್ಸು ಗೆಲ್ಲಬಲ್ಲ. ಅಂಥ ಅಧಿಕಾರಿಗಳ ಪೈಕಿ ಶಂಕರರಾವ ಮುಗಳಿ ಕೂಡ ಒಬ್ಬರು ಎಂದರು.ನಿವೃತ್ತ ಉಪನೋಂದಣಿ ಅಧಿಕಾರಿ ಶಂಕರರಾವ ಮುಗಳಿ ಮಾತನಾಡಿ, ಸುದೀರ್ಘ ಕಾಲದ ಸೇವೆ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ನನಗೆ ಸಂತೃಪ್ತಿ ಇದೆ ಎಂದರು. ಜಗನ್ನಾಥ, ಪ್ರಭಾಕರ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ದಿಲರಾಜ ಪಸಾರಗಿ, ಮಲ್ಲಣ್ಣ ಭಾವಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.