ಅವಧಿ ಸಾಲದು: ತಾ.ಪಂ ಅಧ್ಯಕ್ಷರ ಅಳಲು

7

ಅವಧಿ ಸಾಲದು: ತಾ.ಪಂ ಅಧ್ಯಕ್ಷರ ಅಳಲು

Published:
Updated:

ಮೈಸೂರು: ಇಷ್ಟು ಕಡಿಮೆ ಅವಧಿಯಲ್ಲಿ ನಾವು ಅಂದುಕೊಂಡ ಕೆಲಸ ಮಾಡಲು ಆಗದು. ಮಾಡಬೇಕಾದ ಕೆಲಸಗಳೂ ಸಾಕಷ್ಟು ಇವೆ. ಆದರೂ ನಮ್ಮ ಕೈಲಾದಷ್ಟು ಕೆಲಸವನ್ನು ಮಾಡಿದ್ದೇವೆ.ಇವು ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಕೇಳಿ ಬಂದ ಮಾತುಗಳು. ಸಾಮಾನ್ಯ ಸಭೆ ಬೀಳ್ಕೊಡುಗೆ ಸಭೆಯಾಗಿ ಮಾರ್ಪಡಾಯಿತು. ಅಧ್ಯಕ್ಷರೂ, ಉಪಾಧ್ಯಕ್ಷರೂ ಸೇರಿದಂತೆ ಎಲ್ಲಾ ಸದಸ್ಯರನ್ನು ಅಧಿಕಾರಿ ವರ್ಗ ಬೀಳ್ಕೊಟ್ಟಿತು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವಸಂತಕುಮಾರಿ ಮಾತನಾಡಿ ‘ನಮಗೆ ನೀಡಿರುವ ಅವಧಿ ಸಾಲದು. ಇಷ್ಟು ಕಡಿಮೆ ಅವಧಿಯಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ಅವಧಿಯಲ್ಲಿ ಎಲ್ಲಾ ಕೆಲಸಗಳಿಗೆ ಅಧಿಕಾರಿಗಳು ಸಹಕಾರ ಕೊಟ್ಟರು. ಮುಖ್ಯವಾಗಿ ತಾಲ್ಲೂಕಿನ ಜನತೆ ಸಹಕಾರ ನೀಡಿದರು’ ಎಂದು ಸ್ಮರಿಸಿಕೊಂಡರು.ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ ‘ತಾಲ್ಲೂಕು ಪಂಚಾಯ್ತಿ ಆಡಳಿತದ ಅವಧಿಯಲ್ಲಿ ಅಧಿಕಾರಿ ವರ್ಗ ಹೆಚ್ಚಿನ ಸಹಕಾರ ನೀಡಿದ್ದರಿಂದ ಹೆಚ್ಚು ಕೆಲಸ ಮಾಡಲು ಸಾಧ್ಯವಾಯಿತು. ತಾಲ್ಲೂಕು ಪಂಚಾಯ್ತಿಗೆ ಅನುದಾನ ಬರುವುದು ಕಡಿಮೆ.ಆದರೂ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಪರಿಶಿಷ್ಟ ಜಾತಿ ಹಾಗೂ ಜನಾಂಗದವರಿಗೆ ಸಿಗಬೇಕಾದ ಸವಲತ್ತುಗಳು ಸಿಕ್ಕಿವೆ. ವಿಶೇಷ ಘಟಕ ಯೋಜನೆ ಸಾಕಷ್ಟು ಯಶಸ್ವಿಯಾಗಿದೆ.ನಮ್ಮ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಮುಂದೆ ಆಡಳಿತ ನಡೆಸಲು ಬರುವ ತಂಡ ಅವುಗಳನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಸುರೇಶ್ ಮಾತನಾಡಿ ‘ ತಾಲ್ಲೂಕು ಪಂಚಾಯ್ತಿ ಸದಸ್ಯರು ನಮಗೆ ಯಾವುದೇ ತೊಂದರೆ ಕೊಡದೇ ನಮಗೆ ತುಂಬಾ ಸಹಕಾರ ನೀಡಿದರು ಎಂದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಾಶರಥೀ ತಾ.ಪಂ. ಉಪಾಧ್ಯಕ್ಷೆ ಯಶೋಧಮ್ಮ, ಮಾಜಿ ಅಧ್ಯಕ್ಷರಾದ ಯಶೋಧ ನಾಗೇಶ್, ಶಾಂತಮ್ಮ, ಶಿವಮ್ಮ, ಸದಸ್ಯರಾದ ಜಿ.ಕೆ.ಬಸವಣ್ಣ, ಸಿದ್ದರಾಮೇಗೌಡ, ಹೆಬ್ಬಾಳೇಗೌಡ, ಗುರುಸ್ವಾಮಿ, ಸಿದ್ದೇಗೌಡ, ಶಿವಣ್ಣ, ತಾ.ಪಂ. ಇಓ ಮಹಾಲಿಂಗಪ್ಪ, ಸಿಡಿಪಿಓ ನಾಗರಾಜು, ಬಿಇಓ ಕಾಂತರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ, ತಾಲ್ಲೂಕು ಆರೋಗ್ಯಾಧಿಕಾರಿ ಸುಧಾ ಸಭೆಯಲ್ಲಿ ಹಾಜರಿದ್ದರು. ಆರ್‌ಎಫ್‌ಓ ಬಸವರಾಜು ಸ್ವಾಗತಿಸಿದರು. ಬಿಇಓ   ರಘುನಂದನ್ ವಂದಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry