ಗುರುವಾರ , ಜೂನ್ 17, 2021
29 °C

ಅವನತಿ

ಚಿದಾನಂದ ಸಾಲಿ Updated:

ಅಕ್ಷರ ಗಾತ್ರ : | |

ಎಲ್ಲ ಹಂಚಿಕೊಂಡ ಮೇಲೆ

ಅಮ್ಮ ಉಳಿದಳು

ತಮ್ಮ ನನ್ನ ಕಣ್ತಪ್ಪಿಸಿದ

ನಾನು ಅಮ್ಮನ.

ನಮ್ಮ ಹೆಂಡಿರು

ಮಕ್ಕಳ ಅಳಿಸಿ

ರಮಿಸುತ್ತಿದ್ದರು

ಆರು ತಿಂಗಳ ಮಗಳು

ಎದೆಗೊದೆಯುತ್ತಿದ್ದಳು

ತನ್ನಲ್ಲೇ ಆಡಿಕೊಳ್ಳುತ್ತ

ನಾನು ಅಮ್ಮ ತಮ್ಮ

ರೆಪ್ಪೆ ಪಟಪಟಿಸುತ್ತ

ಆಡಿ ದಣಿದ ಮಗು

ಮುಖ ಬಾಡಿಹೋಗಿದೆ

ಕ್ಷಮಿಸು ಅಪ್ಪ

ಆಕಾಶದಿಂದ ನೀನು

ನೋಡುತ್ತಿರುವಿಯಾದರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.