ಅವನತಿಯತ್ತ ಗ್ರಾಮೀಣ ಕ್ರೀಡೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅವನತಿಯತ್ತ ಗ್ರಾಮೀಣ ಕ್ರೀಡೆ

Published:
Updated:

ಬಸವಾಪಟ್ಟಣ: ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದ್ದ ಗ್ರಾಮೀಣ ಕ್ರೀಡೆಗಳು ಇಂದು ಸಂಪೂರ್ಣ ಮರೆಯಾಗುತ್ತಿದ್ದು, ಪುನಶ್ಚೇತನ ನೀಡಬೇಕು ಎಂದು ಕೋಟೆಹಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ರುದ್ರೇಶ್ ಕರೆ ನೀಡಿದರು.ಸಂಗಾಹಳ್ಳಿಯಲ್ಲಿ ಶುಕ್ರವಾರ ಬಸವಾಪಟ್ಟಣ ಮತ್ತು ಚಿರಡೋಣಿ ಕ್ಲಸ್ಟರ್ ಮಟ್ಟದ ಪ್ರಾಥಮಿಕಶಾಲೆಗಳ  ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ಭಾವನೆ ಇರಬೇಕೇ ಹೊರೆತು, ಸಂಕಚಿತ ಭಾವನೆ ಸಲ್ಲದು ಎಂದು ರತ್ನಮ್ಮ ನುಡಿದರು.

ತಾಲ್ಲೂಕು ದೈಹಿಕ ಶಿಕ್ಷಣ  ನಿರ್ದೇಶಕ ಕೆ. ದೇವೇಂದ್ರಪ್ಪ ಮಾತನಾಡಿ, ಈಕ್ರೀಡಾಕೂಟದಲ್ಲಿ 22 ಶಾಲೆಗಳ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.ಶಿಕ್ಷಣ ಸಂಯೋಜಕ ಎಸ್. ಹನುಮಾನಾಯ್ಕ, ಗ್ರಾಮ ಪಂಚಾಯ್ತಿ ಸದಸ್ಯರಾದ ಬಿ. ಶಿವಮೂರ್ತಿ, ಈರಮ್ಮ, ಹೇಮಣ್ಣ, ಎಪಿಎಂಸಿ ಸದಸ್ಯ ಎಸ್.ಟಿ. ರಾಜಕುಮಾರ್ ಮಾತನಾಡಿದರು. ಕೆ.ಎಸ್. ಉಮೇಶ್ ಸ್ವಾಗತಿಸಿದರು. ಆರ್.ಬಿ. ಶಿವಕ್ಕ ವಂದಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry