ಶನಿವಾರ, ಜೂನ್ 19, 2021
28 °C

ಅವಮಾನವಾಗಿದೆ: ಮುಖೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಜೂನಿಯರ್ ತಂಡದ ಕೋಚ್ ಹುದ್ದೆಯಿಂದ ವಜಾಗೊಳಿಸಿರುವ ಹಾಕಿ ಇಂಡಿಯಾದ ಕ್ರಮದಿಂದ ತಮಗೆ ಅವಮಾನವಾಗಿದೆ ಎಂದು ಮಾಜಿ ಒಲಿಂಪಿಯನ್ ಆಟಗಾರ ಮುಖೇಶ್ ಕುಮಾರ್ ಹೇಳಿದ್ದಾರೆ.

`ಹಾಕಿ ಇಂಡಿಯಾ ತೆಗೆದುಕೊಂಡಿರುವ ಕ್ರಮದಿಂದ ನನಗೆ ಅವಮಾನವಾಗಿದೆ. ಭಾರತ ಹಾಕಿ ಫೆಡರೇಷನ್‌ಗಿಂತ ನರೀಂದರ್ ಬಾತ್ರಾ ಆಡಳಿತದ ಹಾಕಿ ಇಂಡಿಯಾ ಭಿನ್ನವಾಗಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ನನ್ನನ್ನು ಏಕೆ ವಜಾಗೊಳಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನು ಕೇವಲ 21 ದಿನ ತಂಡದೊಂದಿಗೆ ಇದ್ದೆ. ಜೋಹರ್ ಬಹ್ರು ಕಪ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಆದರೂ ನನ್ನ ಮೇಲೆ ಈ ಕ್ರಮ ತೆಗೆದುಕೊಂಡಿದ್ದಾರೆ~ ಎಂದು ಮುಖೇಶ್ ನುಡಿದಿದ್ದಾರೆ.

`ಹಾಕಿ ಇಂಡಿಯಾ ಕೆ.ಪಿ.ಎಸ್.ಗಿಲ್ ಸಾರಥ್ಯದ ಐಎಚ್‌ಎಫ್‌ನಂತೆ ಈಗ ಕಾರ್ಯನಿರ್ವಹಿಸುತ್ತಿದೆ. ನಾನು ಕೋಚ್ ಆಗಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದುಕೊಂಡಿದ್ದೆ. ಆದರೆ ಅದಕ್ಕೆ ಹಾಕಿ ಇಂಡಿಯಾ ಅವಕಾಶ ನೀಡಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖೇಶ್ 307 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಬಲ್ಜಿತ್ ಸಿಂಗ್ ಸೈನಿ ಅವರನ್ನು ಭಾರತ ಜೂನಿಯರ್ ತಂಡದ ನೂತನ ಕೋಚ್ ಆಗಿ ನೇಮಕ ಮಾಡಲಾಗಿದೆ. ಮಾರ್ಚ್ 15ರಂದು ಬೆಂಗಳೂರಿನಲ್ಲಿಆರಂಭವಾಗಲಿರುವ ಶಿಬಿರದಲ್ಲಿ ಅವರು ಈ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.