ಅವರು ಸದನಕ್ಕೆ ಬಂದರೆ ಸ್ಪೀಕರ್ ಕುರ್ಚಿ ಮೇಲೆ ಕೂರುವುದಿಲ್ಲ

7

ಅವರು ಸದನಕ್ಕೆ ಬಂದರೆ ಸ್ಪೀಕರ್ ಕುರ್ಚಿ ಮೇಲೆ ಕೂರುವುದಿಲ್ಲ

Published:
Updated:

ಬೆಂಗಳೂರು: `ನಗ್ನ ಚಿತ್ರ ನೋಡಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ. ರಾಜೀನಾಮೆ ಕೊಟ್ಟು ಇಲ್ಲಿಂದಲೇ ಹೊರಡುವೆ~- ಹೀಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದು ಸ್ಪೀಕರ್ ಕೆ.ಜಿ.ಬೋಪಯ್ಯ.`ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ~ ಎಂದು ಒತ್ತಡ ಹೇರಲು ಬಂದ ಸರ್ಕಾರದ ಪ್ರಮುಖರಿಗೆ ಎಚ್ಚರಿಕೆಯ ಸಂದೇಶ ನೀಡಿದರು ಎನ್ನಲಾಗಿದೆ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಈಶ್ವರಪ್ಪ, ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿ, `ಸಚಿವರಿಗೆ ಸದನ ಪ್ರವೇಶಕ್ಕೆ ನಿರ್ಬಂಧ ಹೇರುವುದು ಬೇಡ~ ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಮಣಿದಿಲ್ಲ. `ಅವರು (ಆರೋಪಿ ಶಾಸಕರು) ಸದನಕ್ಕೆ ಬರಬೇಕೆನ್ನುವುದಾದರೆ ನಾನು ಸದನಕ್ಕೆ ಬರುವುದಿಲ್ಲ.

 

ಆಯ್ಕೆ ನಿಮ್ಮದು. ಸ್ಪೀಕರ್ ಆದ ದಿನದಿಂದ ನನಗೆ ನೆಮ್ಮದಿ ಇಲ್ಲದಂತಾಗಿದೆ. ಈ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಖಚಿತ~ ಎಂದು ಹೇಳಿದಾಗ ಆಡಳಿತ ಪಕ್ಷದ ಮುಖಂಡರೇ ದಂಗಾದರು ಎನ್ನಲಾಗಿದೆ. `ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ವಿಚಾರಣೆ ಪೂರ್ಣವಾಗುವವರೆಗೂ ಮೂವರು ಶಾಸಕರನ್ನು ಸದನದಿಂದ ಹೊರಗಿಡುತ್ತೇನೆ. ಈ ವಿಷಯದಲ್ಲಿ ನನ್ನ ನಿರ್ಧಾರವೇ ಅಚಲ~ ಎಂದು ಹೇಳಿದ ಅವರು ಅದನ್ನು ಪ್ರಕಟಿಸಿದರು ಕೂಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry