ಶುಕ್ರವಾರ, ಏಪ್ರಿಲ್ 16, 2021
31 °C

ಅವಳಿನಗರಕ್ಕೆ ಪಾಟೀಲ ಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಜೆಪಿ ಸದಸ್ಯರಾದ ಧಾರವಾಡದ ಪೂರ್ಣಾ ಪಾಟೀಲ ಹಾಗೂ ಹುಬ್ಬಳ್ಳಿಯ ನಾರಾಯಣ ಜರತಾರಘರ್ ಕ್ರಮವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಗಿ ಶುಕ್ರವಾರ ಆಯ್ಕೆಯಾದರು.ಮೇಯರ್ ಸ್ಥಾನ ಸಾಮಾನ್ಯ ವರ್ಗ (ಮಹಿಳೆ) ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ- ಎ (ಪುರುಷ)ಗೆ ಮೀಸಲಾಗಿತ್ತು. ಮೇಯರ್ ಸ್ಥಾನಕ್ಕೆ ಪೂರ್ಣಾ ಪಾಟೀಲ ಅವರಲ್ಲದೆ ಕಾಂಗ್ರೆಸ್‌ನ ಲಲಿತಾ ಲೋಕೂರು ನಾಮಪತ್ರ ಸಲ್ಲಿಸಿದ್ದರು. ಬಲಾಬಲವನ್ನು ಮತಕ್ಕೆ ಹಾಕಿದಾಗ ಪೂರ್ಣಾ ಪರ 42 ಮತ್ತು ಲಲಿತಾ ಪರ 32 ಮತಗಳು ಬಂದವು. ಹತ್ತು ಮತಗಳ ಅಂತರದಿಂದ ಪೂರ್ಣಾ ಮೇಯರ್ ಆಗಿ ಆಯ್ಕೆಯಾದರು.ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾರಾಯಣ ಜರತಾರಘರ್ ಎದುರು ಕಾಂಗ್ರೆಸ್‌ನ ಮಹಾವೀರ ಶಿವಣ್ಣವರ ಸ್ಪರ್ಧಿಸಿದ್ದರು. ಪಾಲಿಕೆಯ 67 ಸ್ಥಾನಗಳ ಪೈಕಿ ಬಿಜೆಪಿ 36 ಜನ ಸದಸ್ಯ ಬಲದೊಂದಿಗೆ ಬಹುಮತ ಹೊಂದಿತ್ತು. ಜೆಡಿಎಸ್ ಸದಸ್ಯರಾದ ಶಿವು ಹಿರೇಕೆರೂರ ಮತ್ತು ಎಲ್ಲವ್ವ ಹಿರೇಕೆರೂರ ಗೈರು ಹಾಜರಾಗಿದ್ದರು.ಮತದಾನದ ಹಕ್ಕು ಹೊಂದಿದ್ದ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಮೋಹನ ಲಿಂಬಿಕಾಯಿ ಅವರ ಅನುಪಸ್ಥಿತಿಯೂ ಎದ್ದು ಕಾಣುತ್ತಿತ್ತು.ವಿಭಾಗೀಯ ಆಯುಕ್ತ ಸಿ.ಎಂ. ಶಿರೋಳ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ವಿಭಾಗೀಯ ಹೆಚ್ಚುವರಿ ಆಯುಕ್ತ ಡಾ.ವಿಜಯಕುಮಾರ ತೊರಗಲ್ ಅವರಿಗೆ ಸಹಾಯ ನೀಡಿದರು. ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಹಾಜರಿದ್ದರು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.