ಅವಳಿನಗರದಲ್ಲಿ ಹಂದಿಗಳ ಸಾಮ್ರಾಜ್ಯ!

7

ಅವಳಿನಗರದಲ್ಲಿ ಹಂದಿಗಳ ಸಾಮ್ರಾಜ್ಯ!

Published:
Updated:

ಗದಗ: ಅವಳಿನಗರದ ವ್ಯಾಪ್ತಿಯಲ್ಲಿ ಎಲ್ಲೆಡೆಯೂ ಕಂಡುಬರುವ ಎರಡು ಸಾಮಾನ್ಯ ಸಂಗತಿಗಳು ಎಂದರೆ ಒಂದು ದೂಳು, ಮತ್ತೊಂದು ಹಂದಿಗಳು! ವಿಷ್ಣುವಿನ ಅವತಾರಗಳಲ್ಲಿ ಒಂದಾದ ಈ ವರಾಹಗಳು ನಗರದ ಎಲ್ಲೆಡೆ ತಮ್ಮ ಸಾಮ್ರಾಜ್ಯ ಸ್ಥಾಪಿಸಿವೆ. ಕೊಳಗೇರಿಗಳಲ್ಲಂತೂ ಇವು ಇಲ್ಲಿನ  ಜನರ ಬದುಕಿನ ಒಂದು ಭಾಗವೇ ಎಂಬಂತಾಗಿವೆ.

ರಸ್ತೆಯಲ್ಲಿನ ಕಸದ ತೊಟ್ಟಿ, ಖಾಲಿ ನಿವೇಶನ, ಮೈದಾನ, ಗಟಾರ... ಹೀಗೆ ಎಲ್ಲೆಡೆ ಕೊಳಕಿದೆಯೋ ಅಲ್ಲೆಲ್ಲ ಹಂದಿಗಳೇ ಕಾಣುತ್ತವೆ. ಇಂಥ ಓಣಿ ಎಂಬಂತಿಲ್ಲ. ಎಲ್ಲೆಡೆಯೂ ಇವು ಪಸರಿಸಿವೆ. ಜಿಲ್ಲಾ ಆಸ್ಪತ್ರೆಯ ಆವರಣದಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ, ಸರ್ಕಾರಿ ಅತಿಥಿಗೃಹ.... ಹೀಗೆ ಹಂದಿಗಳು ಇರದ ಜಾಗವೇ ಇಲ್ಲ.ನಗರದ ಕೊಳಗೇರಿಗಳಲ್ಲಿ, ಹೊರ ವಲಯದಲ್ಲಂತೂ ಹಂದಿಗಳ ಉಪಟಳ ಮಿತಿಮೀರಿದೆ. ನಗರಸಭೆ ವ್ಯಾಪ್ತಿಯಲ್ಲಿ ಸದ್ಯ 47 ಘೋಷಿತ ಹಾಗೂ 12 ಅಘೋಷಿತ ಸ್ಲಂಗಳಿವೆ.2011ರ ಜನಗಣತಿಯ ಪ್ರಕಾರ ಸುಮಾರು 38 ಸಾವಿರ ಜನ ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಗಲ್ಲಿ-ಗಲ್ಲಿಗಳಲ್ಲೂ ಹಂದಿಗಳು ಕಾಣಸಿಗುತ್ತವೆ.ಬಯಲಲ್ಲೇ ಹಂದಿ ಸಾಕಣೆ

`ನಗರದಲ್ಲಿ ಕೆಲವು ಮಂದಿ ಹಂದಿ ಸಾಕಣೆಯಲ್ಲಿ ತೊಡಗಿದ್ದು, ಕಾನೂನುಬಾಹಿರವಾಗಿ ಹಂದಿಗಳನ್ನು ಬಯಲಿಗೆ ಬಿಡುತ್ತಾರೆ. ಬಿಡಾಡಿ ಹಂದಿಗಳ ಜೊತೆಗೆ ಊರ ತುಂಬ ಇಂತಹ ಸಾಕು ಹಂದಿಗಳು ತುಂಬಿವೆ. ಆದಾಗ್ಯೂ ನಗರಸಭೆ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಸಾರ್ವಜನಿಕರಿಗೆ ಅವುಗಳ ಕಾಟ ತಪ್ಪಿಲ್ಲ~ ಎನ್ನುತ್ತಾರೆ ನಗರದ ವ್ಯಾಪಾರಿ ಜಾವೇದ್. ಈ ಹಿಂದೆ ನಗರಸಭೆಯು ಹೀಗೆ ಹಂದಿ ಸಾಕಣೆ ಮಾಡುವವರಿಗೆ ನೋಟಿಸ್ ನೀಡಿತ್ತು.ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಪರಿಸ್ಥಿತಿ ಉಲ್ಬಣಗೊಳ್ಳುವ ಮುನ್ನ ಹಂದಿಗಳ ಸಂತತಿಯನ್ನು ನಿಯಂತ್ರಿಸಬೇಕು. ಅವುಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry