ಭಾನುವಾರ, ಜೂನ್ 7, 2020
24 °C

ಅವಳಿ ನಗರದಲ್ಲಿ ಮಳೆಯ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಳಿ ನಗರದಲ್ಲಿ ಮಳೆಯ ಆರ್ಭಟ

ಹುಬ್ಬಳ್ಳಿ/ಧಾರವಾಡ: ಅವಳಿನಗರದಲ್ಲಿ ಬುಧವಾರ ಮತ್ತೆ ಧಾರಾಕಾರವಾಗಿ ಮಳೆ ಸುರಿದಿದೆ. ನಸುಕಿನಲ್ಲೇ ಶುರುವಾಗಿದ್ದ ಮಳೆ ಮಧ್ಯೆ ಒಂದಿಷ್ಟು ಬಿಡುವು ನೀಡಿತ್ತಾದರೂ ಸಂಜೆ ಮತ್ತೆ ಆರ್ಭಟಿಸಿತು. ಹುಬ್ಬಳ್ಳಿಗಿಂತ ಧಾರವಾಡದಲ್ಲಿ ಮಳೆಯ ಆಟಾಟೋಪ ಜೋರಾಗಿತ್ತು.ಧಾರವಾಡದ ಮುರುಘಾಮಠ ಹಿಂದಿನ ಹಾವೇರಿಪೇಟೆಯಲ್ಲಿ ಮಳೆಯಿಂದ ರಸ್ತೆಗಳೆಲ್ಲ ಕಾಲುವೆ ರೂಪ ತಾಳಿದ್ದವು. ಮನೆಗಳಿಗೂ ನೀರು ನುಗ್ಗಿತ್ತು. ಇದೇ ಪ್ರದೇಶದ ಈಶ್ವರ ದೇವಸ್ಥಾನದ ಗರ್ಭಗುಡಿವರೆಗೆ ಮಳೆ ನೀರು ಹರಿದಾಡಿತು. ಕೊಪ್ಪದಕೇರಿಯ ಶಿವಾಲಯ ಜಲಾವೃತವಾಗಿತ್ತು. ರಸ್ತೆಗಳಲ್ಲೆಲ್ಲ ನೀರಿನ ಪ್ರವಾಹ ಹೆಚ್ಚಿದ್ದರಿಂದ ವಾಹನಗಳ ಓಡಾಟಕ್ಕೂ ಅಡಚಣೆಯಾಯಿತು.ಮನೆಗೆ ನುಗ್ಗಿದ ಮಳೆ ನೀರನ್ನು ಹೊರಗೆ ಹಾಕಲು ನಿವಾಸಿಗಳು ಮಧ್ಯರಾತ್ರಿವರೆಗೆ ಹೆಣಗಾಡಿದರು. ಹುಬ್ಬಳ್ಳಿಯಲ್ಲೂ ಸಂಜೆ ಮಳೆ ಬಿರುಸಿನಿಂದ ಸುರಿಯಿತು. ಮಾರ್ಕೆಟ್‌ಗೆ ತೆರಳಿದ್ದ ಜನ ಮಳೆಯಿಂದ ಪ್ರಯಾಸಪಡಬೇಕಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.