ಮಂಗಳವಾರ, ನವೆಂಬರ್ 19, 2019
23 °C

ಅವಶೇಷ ಪತ್ತೆ

Published:
Updated:

ವಾಷಿಂಗ್ಟನ್ (ಪಿಟಿಐ): ಇಟಲಿಯ ಪುರಾತತ್ವಜ್ಞರು ಟರ್ಕಿಯಲ್ಲಿ `ಪುರಾತನ ಗುಹೆ'ಯ ಅವಶೇಷ ಪತ್ತೆಮಾಡಿದ್ದಾರೆ. `ನರಕದ ಬಾಗಿಲು'ಎಂದು ನಂಬಲಾಗಿರುವ ಈ ಗುಹೆಯಿಂದ ಅಪಾಯಕಾರಿ ಇಂಗಾಲದ ಹೊಗೆ ಹೊರಸೂಸುತ್ತಿದೆ. ಈ ಗುಹೆಯನ್ನು `ಪ್ಲುಟೋ ಗೇಟ್' ಎಂದೂ ಕರೆಯಲಾಗಿದೆ.



`ಫ್ರೈಜಿಯನ್ ಸಂಸ್ಕೃತಿಯ ಹಿರಾಪೊಲಿಸ್ ನಗರದ (ಇಂದಿನ ಪಮುಕ್ಕಲೆ) ಸಮೀಪ ಈ ಅವಶೇಷ ಪತ್ತೆಯಾಗಿದೆ' ಎಂದು `ಡಿಸ್ಕವರಿ ನ್ಯೂಸ್' ವರದಿ ಮಾಡಿದೆ.

ಈ ಗುಹೆಯ ತುಂಬ ದಟ್ಟವಾದ ಕೆಟ್ಟ ಹೊಗೆ ತುಂಬಿದ್ದು, ಯಾವುದೇ ಪ್ರಾಣಿ ಒಳಹೊಕ್ಕರೆ ಸಾವು ನಿಶ್ಚಿತ ಎಂದು ಗ್ರೀಕ್‌ನ ಭೂವಿಜ್ಞಾನಿ ಸ್ಟ್ರಾಬೋ, ಕ್ರಿ.ಪೂ.64-63ರಲ್ಲೇ ಬರೆದಿದ್ದರು.



`ಗುಹೆಯೊಳಗೆ ಗುಬ್ಬಚ್ಚಿಗಳನ್ನು ಎಸೆದಾಗ ಅವು ಕ್ಷಣಮಾತ್ರದಲ್ಲಿ ಸಾವನ್ನಪ್ಪಿದವು' ಎಂದೂ ಅವರು ಉಲ್ಲೇಖಿಸಿದ್ದರು. ಪುರಾತನ ಕಾಲದ ಈ ಗುಹಾವಶೇಷವನ್ನು ಸಲೆಂಟೋ ವಿಶ್ವವಿದ್ಯಾಲಯದ ಪ್ರೊ. ಫ್ರಾನ್ಸಿಸ್ಕೋ ಡಿ'ಆಂಡ್ರಿಯಾ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.

ಪ್ರತಿಕ್ರಿಯಿಸಿ (+)