ಗುರುವಾರ , ಮೇ 13, 2021
39 °C

ಅವಸಾನದತ್ತ ಕ್ಯಾನ್ಸರ್ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗದಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದೆ ಸ್ಥಾಪನೆಯಾದ 50 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆ ಇದೀಗ ತನ್ನ ಚರಮ ಗೀತೆ ಹಾಡುವ ಹಂತ ತಲುಪಿದೆ.   ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಧೀನದಲ್ಲಿ ಕಾಯರ್ರ್ನಿರ್ವಹಿಸುತ್ತಿದ್ದ ಈ ಆಸ್ಪತ್ರೆಯಲ್ಲಿ 1980ರಿಂದ ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ವಿಕಿರಣ ಚಿಕಿತ್ಸೆಯನ್ನು ನೀಡಲಾಗಿದೆ. ಹೆಚ್ಚಿನ ರೋಗಿಗಳು ಬಡವರು.

  ಉಳ್ಳವರು ದೊಡ್ಡ ನಗರಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇಬ್ಬರು ಮುಖ್ಯಮಂತ್ರಿಗಳು, ಹಲವಾರು ಸಂಪುಟ ದರ್ಜೆ ಮಂತ್ರಿಗಳನ್ನು ನೀಡಿದ ಈ ನಾಡಿನಲ್ಲಿ ಒಂದು ಆಸ್ಪತ್ರೆ ಕೊನೆಯುಸಿರಿನ ಹಂತ ತಲುಪಿದ್ದಕ್ಕೆ ಸರ್ಕಾರದ ಬೇಜವಾಬ್ದಾರಿ ಕಾರಣ. ಆಸ್ಪತ್ರೆಯನ್ನು ಉಳಿಸಿಕೊಳ್ಳುವಲ್ಲಿ ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ.ಆದ್ದರಿಂದ ಇದು ಖಾಸಗಿಯವರ ಪಾಲಾಗುವ ಹಂತ ತಲುಪಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡಿ ಖಾಸಗಿಯವರಿಗೆ ವಹಿಸಿ ಕೊಡುವ ತೆರೆಮರೆ ಕಸರತ್ತನ್ನು ತಕ್ಷಣ ನಿಲ್ಲಿಸಬೇಕಿದೆ. ಹಿಂದುಳಿದ ಈ ಭಾಗದಲ್ಲಿ ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಬೇಕೆ ಹೊರತು ಇರುವ ಸೌಲಭ್ಯಗಳು ಕಿತ್ತು ಹೋಗಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.