ಶುಕ್ರವಾರ, ಮೇ 14, 2021
29 °C

ಅವಸಾನದ ಅಂಚಿನಲ್ಲಿ ಪ್ರಾಚೀನ ದೇಗುಲ.

ಪ್ರಜಾವಾಣಿ ವಾರ್ತೆ / ಬಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

ರೋಣ: ಗತಕಾಲದ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಹಾಗೂ ಆಡಳಿತ ವೈಖರಿಯ ಪ್ರತೀಕವಾಗಿ ಐತಿಹಾಸಿಕ ಸಯ್ಯಾಡಿ(ಈಗಿನ ಸವಡಿ ತಾ:ರೋಣ ಜಿ:ಗದಗ) ಗ್ರಾಮದಲ್ಲಿ ನಿರ್ಮಿಸ ಲಾಗಿರುವ, ಪ್ರಾಚೀನ, ಐತಿಹಾಸಿಕ ದೇವಾಲಯ ಹಾಗೂ ಮೂರ್ತಿಗಳು ಶಿಥಿಲಗೊಂಡಿದ್ದು ಕಾಲಗರ್ಭ ಸೇರಲು ತುದಿಗಾಲಲ್ಲಿ ನಿಂತಂತೆ ತೋರುತ್ತಿದೆ.

ಸುಮಾರು ಒಂದು ಸಾವಿರ ವರ್ಷಗಳ ಹೊಂದಿರುವ ಸವಡಿ ಗ್ರಾಮದಲ್ಲಿ ಈಗ  ಶಿಥಿಲಗೊಂಡ ದೇವಾಲಯ, ಶಾಸನ, ಭಗ್ನಗೊಂಡ ಪ್ರಾಚೀನ ಮೂರ್ತಿಗಳು ಎಲ್ಲೆಡೆ ಕಾಣುತ್ತಿವೆ.ಪ್ರಾಚ್ಯವಸ್ತು ಹಾಗೂ ಪ್ರವಾಸೋ ದ್ಯಮ ಇಲಾಖೆ ಇವುಗಳನ್ನು ಸಂರಕ್ಷಿಸಿ, ಕಾಯಕಲ್ಪ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ. ಈ ಐತಿಹಾಸಿಕತೆಯ ಮಹಾ ವಸ್ತುಗಳು ಇನ್ನು ಎಷ್ಟು ದಿನ ಉಳಿದಾವು ಎನ್ನುವ ಪ್ರಶ್ನೆ ಇತಿಹಾಸ ಕಳಕಳಿ ಯುಳ್ಳವರನ್ನು ಕಾಡ ಲಾರಂಬಿಸಿದೆ.ಐತಿಹಾಸಿಕ ಹಿನ್ನೆಲೆ 

ಸವಡಿಯು ರೋಣದಿಂದ ನೈರುತ್ಯಕ್ಕೆ 8 ಕಿ.ಮೀ ದೂರದಲ್ಲಿದೆ. ಬಾದಾಮಿ ಚಾಲುಕ್ಯರು ಕ್ರಿಶ.683ರ ಲಕ್ಷೇಶ್ವರ ಶಾಸನದಲ್ಲಿ ಹಡಗಿಲೆ ಗ್ರಾಮದ ಸೀಮೆಯನ್ನು ಉಲ್ಲೇಖಿಸುವಾಗ ಸಯ್ಯಡಿಗೆ ಹೋದ ದಾರಿ ಎಂಬ ಪ್ರಯೋಗವಿರುವದರಿಂದ ಈ ಊರಿನ ಪ್ರಾಚೀನತೆಯನ್ನು ಗುರುತಿ ಸಬಹುದಾಗಿದೆ.ಸಯ್ಯಡಿಯಿಂದ 3 ಶಾಸನಗಳು ಪತ್ತೆ ಯಾಗಿವೆ 1)ಕ್ರಿ.ಶ.970ರ ರಾಷ್ಟ್ರಕೂಟರ ಖೋಟ್ಟಿಗನ ಶಾಸನ 2) ಕ್ರಿ..1083ರ ಶಾಸನ 3)ಇಮ್ಮಡಿ ದೇವ ರಾಯನ ಕಾಲದ ಕ್ರಿ.ಶ 1431ರ ಶಾಸನ ಈ ಊರಲ್ಲಿರುವ ಬ್ರಮ್ಮೇಶ್ವರ ದೇವಾಲ ಯ ರಾಷ್ಟ್ರಕೂಟರ ಕಾಲದ ರಚನೆ ಯಾಗಿದೆ.ಸಭಾಮಂಟಪ ವಿಜಯನಗರ ಕಾಲದಲ್ಲಿ ವಿಸ್ತಾರಗೊಂಡಂತೆ ತೋರು ತ್ತದೆ. ಸಪ್ತಮಾತ್ರಕ ಪಟ್ಟಿಕೆ, ಜೈನ ತೀರ್ಥಂಕರ, ಆದಿತ್ಯ ಶಿಲ್ಪಗಳಿವೆ. ನಾಲ್ಕು ಮಾದರಿಯ 60 ಕಂಬಗಳಿರುವ ಮಂಟಪ ಸಂಪೂರ್ಣ ಶಿಧಿಲಾವಸ್ಥೆ ಯಲ್ಲಿದೆ.ಸವಡಿ ಗ್ರಾಮದಲ್ಲಿರುವ ಐತಿಹಾಸಿಕ ಬ್ರಹ್ಮಶ್ವರಗುಡಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ರಚನೆಯಾಗಿದ್ದು ವಿಜಯನಗರ ಅರಸರ ಅವಧಿಯಲ್ಲಿ ಜಿರ್ಣೋದ್ದಾರ ಒಳಪಟ್ಟಿತು.ಗರ್ಭಗುಡಿ, ತೆರದ ಮಂಟಪ, ವಿಶಾಲವಾದ ಸಭಾ ಮಂಟಪ ಹೊಂದಿರುವ ಇದರ ಗರ್ಭಗುಡಿಯಲ್ಲಿ ಒಂದೇ ಪೀಠದಲ್ಲಿ ಹಂಸ ಪೀಠದ ಮೇಲಿರುವ ಚರ್ತುಮುಖ ಬ್ರಹ್ಮ , ನಂದಿ, ಪೀಠದಲ್ಲಿ ಮೇಲಿರುವ ಶಿವಲಿಂಗ ಹಾಗೂ ಗರುಡ ಪೀಠದ ಮೇಲೆ ಇರುವ ಚರ್ತುಮುಖ ವಿಷ್ಣು ಮೂರ್ತಿಗಳು ಇದ್ದು ಅತ್ಯಂತ ಆಕರ್ಷಕವಾಗಿವೆ.ಗರ್ಭಗೃಹ ಬಾಗಿಲವಾಡ ಪಂಚ ಶಾಖಾಲಂಕೃತವಾಗಿದ್ದು ಹಂಸವಾಳಿಯ ಸಾಲನ್ನು ಹೊಂದಿದೆ. ಹೊರಬದಿಯಲ್ಲಿ ನಕ್ಷತ್ರಕಾರಕದ ತಳವಿನ್ಯಾಸ ಹೊಂದಿದೆ ಸಭಾ ಮಂಟಪ ವಿಜಯ ನಗರ ಅರಸರ ಕಾಲದಲ್ಲಿ ವಿಸ್ತಾರಗೊಂಡಂತೆ ಕಾಣುತ್ತದೆ.ಸಭಾ ಮಂಟಪದಲ್ಲಿ ಸಪ್ತ ಮಾತೃಕಾ ಪಟ್ಟಿಕೆ ಜೈನ ತೀರ್ಥಂಕರ ಶಿಲ್ಪಗಳಿವೆ, 60 ಕಂಬಗಳ ಸಭಾ ಮಂಟಪ ನೀರಾಡಂಬರವಾಗಿದ್ದು  ಇಂತಹ ಅಮೂಲ್ಯ ಐತಿಹಾಸಿಕ ಶಿಲ್ಪ ಕಲಾ ವೈಭವವನ್ನು ಹೊಂದಿರುವ ಸವಡಿ ಗ್ರಾಮದ ಬ್ರಹ್ಮೇಶ್ವರ ವೀರನಾರಾಯಣ ದೇವಾಲಯ. ಐತಿಹಾಸಿಕ ಬಾವಿ ಕಾಲಗರ್ಭದಲ್ಲಿ ಲೀನವಾಗುವ ಮುನ್ನ  ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಪುರಾತತ್ವ ಹಾಗೂ ಪ್ರಾಚ್ಯವಸ್ತು ಪ್ರವಾಸೋದ್ಯಮ ಇಲಾಖೆ ಜಾಗೃತವಾಗಿ ಎಚ್ಚೆತ್ತುಕೊಳ್ಳಬೇಕಿದೆ. ಇಂತಹ ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಉಳಿಸುವ ದಿಸೆಯಲ್ಲಿ ಕಾರ್ಯ ನಿರತರಾಗಲಿ ಎನ್ನುವುದೆ ಐತಿಹಾಸಿಕ ಸ್ಮಾರಕ ಪ್ರೀಯರ ಹಾಗೂ ಸಾಮಾನ್ಯರ ಆಶಯವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.