ಭಾನುವಾರ, ಡಿಸೆಂಬರ್ 15, 2019
23 °C

ಅವಾರ್ಡ್ಸ್ ಮೇಲೆ ಭಂಡಾರ್ಕರ್‌ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅವಾರ್ಡ್ಸ್ ಮೇಲೆ ಭಂಡಾರ್ಕರ್‌ಕಣ್ಣು

ಮಧುರ್ ಭಂಡಾರ್ಕರ್ ಈಗ `ಅವಾರ್ಡ್~ಗಾಗಿ ಯೋಜನೆ ಸಿದ್ಧಪಡಿಸುತ್ತಿದ್ದಾರೆ ಅಂತ ಸುದ್ದಿಯೊಂದು ಹರಡಿದೆ.ಅವರ ಚಿತ್ರಗಳಿಗೆ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರುವಾಗ ಯೋಜನೆಯ ಪ್ರಶ್ನೆ ಏನು ಬಂತು ಅಂತ ಅಭಿಮಾನಿಗಳು ಹುಬ್ಬುಗಂಟಿಕ್ಕಿದ್ದಾರೆ. ಆದರೆ ವಿಷಯ ಅದಲ್ಲ, `ಚಾಂದನಿ ಬಾರ್~, `ಪೇಜ್ 3~, `ಟ್ರಾಫಿಕ್ ಸಿಗ್ನಲ್~ `ಜೈಲ್~ `ಕಾರ್ಪೊರೇಟ್~ ಹಾಗೂ `ಫ್ಯಾಶನ್~ನಂಥ ಚಿತ್ರಗಳನ್ನು ನಿರ್ದೇಶಿಸಿರುವ ಭಂಡಾರ್ಕರ್ ಚಲನಚಿತ್ರ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ `ಅವಾರ್ಡ್ಸ್~ ಚಿತ್ರದ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ್ದಾರೆ.ಸದ್ಯಕ್ಕೆ ಅವರ ಬಹುನಿರೀಕ್ಷಿತ ಚಿತ್ರ `ಹೀರೊಯಿನ್~ ಈ ವರ್ಷ ತೆರೆ ಕಾಣಲಿದ್ದು, ಅದರ ಸಿದ್ಧತೆಯಲ್ಲಿ ನಿರತರಾಗಿರುವುದಾಗಿ ಹೇಳಿದ್ದಾರೆ. ಚಲನಚಿತ್ರ ನಟಿಯ ಜೀವನದ ಒಳಚಿತ್ರಣ ನೀಡುವ ಈ ಚಿತ್ರದಲ್ಲಿ ಮಾಹಿ ಖನ್ನಾ ಎಂಬ ಪಾತ್ರವನ್ನು ಐಶ್ವರ್ಯ ರೈ ನಿರ್ವಹಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ಪಾತ್ರವನ್ನೀಗ ಕರೀನಾ ಕಪೂರ್ ನಿರ್ವಹಿಸುತ್ತಿದ್ದಾರೆ. 

 

ಪ್ರತಿಕ್ರಿಯಿಸಿ (+)