ಅವಿಶ್ವಾಸ ಮಂಡನೆಗೆ ಮನವಿ

7

ಅವಿಶ್ವಾಸ ಮಂಡನೆಗೆ ಮನವಿ

Published:
Updated:

ಆಲಮೇಲ: ಸಮೀಪದ ಕಡಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಣಮಂತ್ರಾಯ ಸಿದ್ರಾಮಪ್ಪ ಕಳಸಗೊಂಡ ವಿರುಧ್ದ ಅವಿಶ್ವಾಸ ಮಂಡನೆಗೆ ಅವಕಾಶ ಕೋರಿ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಸೆ.30ರಂದು 11ಜನ ಸದಸ್ಯರು ಮನವಿ ಮಾಡಿದ್ದಾರೆ.ಕಡಣಿ, ತಾವರಖೇಡ, ತಾರಾಪೂರ, ಮದನಹಳ್ಳಿ ಗ್ರಾಮಗಳನ್ನೊಳಗೊಂಡ ಕಡಣಿ ಗ್ರಾಮ ಪಂಚಾಯ್ತಿ ಒಟ್ಟು 15ಸದಸ್ಯ ಬಲ ಹೊಂದಿದೆ.ಇದರಲ್ಲಿ 11 ಜನ ಸದಸ್ಯರು ಇವರ ವರ್ತನೆಯನ್ನು ಖಂಡಿಸಿ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದುಕೊಂಡು ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ.ಇವರ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ,ಯಾವುದೇ ಸದಸ್ಯರ ಗಮನಕ್ಕೆ ಬಾರದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವುದು,ಹಾಗೂ ಅನುದಾನ ದುರ್ಬಳಕೆ,ಸಭೆ ನಡೆಸದಿರುವದು ಮುಂತಾದ ಆರೋಪಗಳನ್ನು ಹೊರೆಸಿ 11 ಜನ ಸದಸ್ಯರು ಗೊತ್ತುವಳಿಗೆ ಸಹಿ ಹಾಕಿದ್ದಾರೆ.ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು ಆದಷ್ಟು ಬೇಗನೇ ಸಭೆ ಕರೆದು ಅವಿಶ್ವಾಸ ಮಂಡನೆಗೆ ಅವಕಾಶ ಕೊಡುವದಾಗಿ ತಿಳಿಸಿದ್ದಾರೆ.ಮನವಿ ಪತ್ರಕ್ಕೆ ಗ್ರಾಪಂ ಸದಸ್ಯರಾದ ಬಸವರಾಜ ತಾವರಗೇರಿ, ಉಪಾಧ್ಯಕ್ಷ ಪಂಡಿತ ಮೇಲಿನಮನಿ, ದೇವಪ್ಪಗೌಡ ಬಿರಾದಾರ,ಸುರೇಶ ಸಾಯಬಣ್ಣ ಪೂಜಾರಿ, ರಮಾಬಾಯಿ ಲವಪ್ಪ ಹರಿಜನ,ಸಾವಿತ್ರಿ ಶರಣಪ್ಪ ನಾಟೀಕಾರ,ಮಹಾದೇವಿ ಇಂದ್ರಜೀತ ಕ್ಷತ್ರಿ,ಹುಚ್ಚಪ್ಪ ತಳಕೇರಿ,ತುಳಸಾ ಶ್ರೀಶೈಲ ವಡ್ಡರ, ಶಿವಶರಣ ಮಸಳಿ ಹಾಗೂ ಬೇಬಿಜಾನ್ ಸೈ ವಾಡೇದ ಸಹಿ ಹಾಕಿದ್ದಾರೆ.ತಾರಾಪೂರ ಗ್ರಾಮದ ಗ್ರಾ.ಪಂ.ಸದಸ್ಯ ದೇವಪ್ಪಗೌಡ ಬಿರಾದಾರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಈ ಎಲ್ಲ ಸದಸ್ಯರು ತೆರೆಯ ಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ.

ವಿಜಾಪುರ ನೀರು ಪೂರೈಕೆಯಲ್ಲಿ ವ್ಯತ್ಯಯವಿಜಾಪುರ: ವಿಜಾಪುರ ನಗರದ ಉತ್ತರ ಭಾಗಕ್ಕೆ ನೀರು ಪೂರೈಸುವ ಭೂತನಾಳ ಕೆರೆ ಮುಖ್ಯ ಸ್ಥಾವರದಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟಿದ್ದು, ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಲಮಂಡಳಿಯವರು ತಿಳಿಸಿದ್ದಾರೆ.

ಇದರಿಂದಾಗಿ ಭೂತನಾಳ ಕೆರೆ ಮೂಲದಿಂದ ಕೆ.ಎಚ್.ಬಿ. ಕಾಲೋನಿ ಹಾಗೂ ಬಿ.ಎಲ್.ಡಿ.ಇ. ಮೇಲ್ಮಟ್ಟದಜಲಸಂಗ್ರಹಗಾರಗಳಿಂದ ಪೂರೈಕೆಯಾಗುವ ಕೆ.ಎಚ್.ಬಿ. ಕಾಲೋನಿ, ಕೆ.ಸಿ.ನಗರ, ಆದರ್ಶ ನಗರ, ಆನಂದ ನಗರ, ಆಶ್ರಮ ಇತರ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry