ಅವ್ಯವಸ್ಥೆಯ ಆಗರ ಈ ನೆಮ್ಮದಿ ಕೇಂದ್ರ

7

ಅವ್ಯವಸ್ಥೆಯ ಆಗರ ಈ ನೆಮ್ಮದಿ ಕೇಂದ್ರ

Published:
Updated:
ಅವ್ಯವಸ್ಥೆಯ ಆಗರ ಈ ನೆಮ್ಮದಿ ಕೇಂದ್ರ

ದಾವಣಗೆರೆ: ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಇರುವ ನೆಮ್ಮದಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು ವಿವಿಧ ಕಾರಣಗಳಿಗಾಗಿ ಜಾತಿ, ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಸೋಮವಾರ ಇಡೀ ದಿನ ಕಾದರು.ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳ ಸಾರ್ವಜನಿಕರು ಮೂರು ದಿನ ಅಲೆದರೂ ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.ಕೆಲ ಪುರುಷರು ರಾತ್ರಿಯೇ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಮಲಗಿ ಬೆಳಿಗ್ಗೆ ಬೇಗ ಎದ್ದು ಸರದಿಯಲ್ಲಿ ನಿಂತಿದ್ದರು. ಆದರೂ, ಅವರಿಗೆ ಮಧ್ಯಾಹ್ನದವರೆಗೆ ಅರ್ಜಿ ಸಲ್ಲಿಸುವ ಯೋಗ ದೊರೆತಿರಲಿಲ್ಲ.`ಮಗಳ ಶಿಕ್ಷಣಕ್ಕೆ ಆದಾಯ ಪ್ರಮಾಣಪತ್ರ ಬೇಕಿದೆ. ಬೆಳಿಗ್ಗೆ 4-5ಗಂಟೆಗೆ ಬಂದವರು ಇನ್ನೂ ಸರದಿಯಲ್ಲೇ ಇದ್ದೇವೆ. ಈಗಾದರೆ ಹೇಗೆ? ನಾವು ಕೂಲಿ ಮಾಡೋರು, ದಿನವೆಲ್ಲ ಇಲ್ಲೇ ಕಳೆದರೆ ಹೊಟ್ಟೆಗೆ ಏನು ತಿನ್ನುವುದು~ ಎಂದು ಅಲ್ಲಿನ ಸ್ಥಿತಿ ತೆರೆದಿಟ್ಟರು ಕಕ್ಕರಗೊಳ್ಳದ ಜರಿನಾಬಿ. ಈ ಬಗ್ಗೆ ನೆಮ್ಮದಿ ಕೇಂದ್ರದ ಸಿಬ್ಬಂದಿ ವಿಚಾರಿಸಿದರೆ, ಇರುವುದು ಒಂದೇ ಕಂಪ್ಯೂಟರ್, ಇಬ್ಬರು ಸಿಬ್ಬಂದಿ, ಸರ್ವರ್ ಸಮಸ್ಯೆ. ಹಾಗಾಗಿ, ವಿಳಂಬವಾಗುತ್ತಿದೆ. ಮೊದಲು ಎರಡು ಕಂಪ್ಯೂಟರ್ ಇದ್ದವು. ಬೇರೆ ಕಡೆ ಪ್ರತಿಭಟನೆ ಮಾಡಿದ ಪರಿಣಾಮ ಅಲ್ಲಿಗೆ ಒಂದನ್ನು ಕಳುಹಿಸಲಾಗಿದೆ ಎನ್ನುತ್ತಾರೆ.ಬೆಳಿಗ್ಗೆಯಿಂದ ಅರ್ಜಿ ಸಲ್ಲಿಸಲು ಕಾದ ಕೆಲವರು ವಿಳಂಬ ಖಂಡಿಸಿ ಸ್ಥಳದಲ್ಲಿ ಪ್ರತಿಭಟನೆಯನ್ನೂ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry