ಶನಿವಾರ, ಫೆಬ್ರವರಿ 27, 2021
31 °C
ನಗರಸಭೆಯ ಕೂಗಳತೆ ದೂರದಲ್ಲಿದ್ದರೂ ನಿರ್ಲಕ್ಷ್ಯವಾಗಿರುವ ಗಾಂಧಿ ಪಾರ್ಕ್‌

ಅವ್ಯವಸ್ಥೆಯ ತಾಣವಾದ ಉದ್ಯಾನ

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಅವ್ಯವಸ್ಥೆಯ ತಾಣವಾದ ಉದ್ಯಾನ

ಮಂಡ್ಯ: ನಗರದ ಮಹಾತ್ಮಾಗಾಂಧಿ ಉದ್ಯಾನ ನಗರಸಭೆಯ ಕೂಗಳತೆಯ ದೂರದಲ್ಲಿದೆ. ನಗರಸಭೆ ಆವರಣದಲ್ಲಿ ನಿಂತರೆ ಕಾಣಿಸುತ್ತದೆ. ಆದರೂ ಸುಧಾರಣೆ ಕಂಡಿಲ್ಲ. ಅವ್ಯವಸ್ಥೆಯ ಆಗರವಾಗಿದೆ.ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದೆ. 1934ರಲ್ಲಿ ಮಹಾತ್ಮ ಗಾಂಧಿ ಅವರು ಇಲ್ಲಿಗೆ ಭೇಟಿ ನೀಡಿದ ನೆನಪಿಗಾಗಿ ಈ ಉದ್ಯಾನಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಅವರ ಹೆಸರಿನಲ್ಲಿರುವ ಪಾರ್ಕ್‌್ ನಿರ್ವಹಣೆ ಮಾಡದಿರುವುದು ದುತಂರವೇ ಸರಿ.ಕೆಲವೆಡೆ ಹಸಿರು ಉತ್ತಮವಾಗಿಯೇ ಇದೆ. ಮಧ್ಯಾಹ್ನ ಹೊತ್ತಿನಲ್ಲಿ ಹೋದರೆ ಹತ್ತಾರು ಜನರು ಇಲ್ಲಿನ ಮರಗಳ ಕೆಳಗೆ ನಿದ್ರಾದೇವಿಗೆ ಶರಣಾಗಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಕೆಲವು ಕಡೆಗಳಲ್ಲಿ ನಿರ್ವಹಣೆಯೇ ಇಲ್ಲದಂತಾಗಿದೆ. ನೋಡುಗರ ಮನ ನೋಯಿಸುತ್ತದೆ.ಮಕ್ಕಳಿಗಾಗಿ ಪಾರ್ಕ್‌ನಲ್ಲಿ ಡೈನೋಸಾರ್‌ ಪ್ರತಿಮೆ ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆ ಹಾಗೂ ಮದ್ಯಪಾನ ಮಾಡುವವರ ಹಾವಳಿಯಿಂದಾಗಿ ಕುಟುಂಬದೊಂದಿಗೆ ಈ ಪಾರ್ಕ್‌ಗೆ ಇತ್ತೀಚಿನ ವರ್ಷಗಳಲ್ಲಿ ಬರುವವರ ಸಂಖ್ಯೆ ಇಳಿಮುಖಗೊಂಡಿದೆ.ಹಿಂದೆ ಉದ್ಯಾನದಲ್ಲಿ ಪುಟ್ಟ ಕೊಳ ನಿರ್ಮಿಸಲಾಗಿತ್ತು. ಅದರಲ್ಲಿ ಬಾತುಕೋಳಿಗಳನ್ನು ಬಿಡಲಾಗಿತ್ತು. ಜತೆಗೆ ಕೃತಕ ಜಲಪಾತ ನಿರ್ಮಿಸಲಾಗಿತ್ತು. ಇದರಿಂದಾಗಿ ಕುಟುಂಬ ಸಮೇತ ಜನರು ಇತ್ತ ಬರುತ್ತಿದ್ದರು. ನಿರ್ವಹಣೆ ಇಲ್ಲದ್ದರಿಂದ ಕೊಳ ಹಾಳಾಗಿದೆ. ಕಸ, ಕಡ್ಡಿಯಿಂದ ತುಂಬಿದ್ದು, ನೀರು ಮಲೀನಗೊಂಡಿದೆ. ಜತೆಗೆ ಸುತ್ತಲಿನ ಅಂಗಡಿಗಳವರಿಗೂ ಅದು ಕಸದ ತಾಣವಾಗಿದೆ. ಆಕಾಸ್ಮಾತಾಗಿ ಮಕ್ಕಳು ಬಂದು ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ಎಚ್ಚೆತ್ತು ಕೊಳ್ಳಬೇಕಿದೆ.ಬಹು ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರು ಗುತ್ತಿದ್ದವು ಎಂಬುದನ್ನು ಹಿರಿಯರು ನೆನೆಪಿಸಿಕೊಳ್ಳುತ್ತಾರೆ. ಹೀಗೆ ಅಂತಹ ಯಾವುದೇ ಚಟುವಟಿಕೆಗಳು  ನಡೆಯುದಿಲ್ಲ.ಉದ್ಯಾನದಲ್ಲಿ ಮಕ್ಕಳ ಯಾವುದೇ ಆಟಿಕೆ ಸಾಮಾನುಗಳೂ ಇಲ್ಲ. ಇದರ ಮೇಲೆ ಕೆಲವು ನಗರಸಭೆ ಸದಸ್ಯರ ಕಣ್ಣು ಬಿದ್ದಿದ್ದು, ಇಲ್ಲಿ ಮಳಿಗೆಗಳನ್ನು ಕಟ್ಟಿ ಬಾಡಿಗೆ ನೀಡಬೇಕು ಎಂಬ ಮಾತನ್ನು ಆಡಿದ್ದರು. ಹಾಗೆಯೇ ಬಿಟ್ಟರೆ ಮುಂದಿನ ಉದ್ಯಾನ ಹೋಗಿ, ಕಾಂಕ್ರಿಟ್‌ ಕಟ್ಟಡವಾದರೆ ಆಶ್ಚರ್ಯವಿಲ್ಲ ಎನ್ನುತ್ತಾರೆ ನಾಗರಿಕರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.