ಅವ್ಯವಸ್ಥೆಯ ತಾಣ ಡಿ.ಪಾಳ್ಯ ಗ್ರಾಮ

7

ಅವ್ಯವಸ್ಥೆಯ ತಾಣ ಡಿ.ಪಾಳ್ಯ ಗ್ರಾಮ

Published:
Updated:

ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ ರಥ ಬೀದಿಯಲ್ಲಿ ಆರು ತಿಂಗಳುಗಳಿಂದ ಚರಂಡಿ ಸ್ವಚ್ಚಮಾಡದೆ ದುರ್ನಾತ ಹೊಡೆಯುತ್ತಿದೆ. ಚರಂಡಿ ಯಲ್ಲಿ ಪಾರ್ಥೇನಿಯಂ ಗಿಡಗಳು ಮತ್ತು ಹುಲ್ಲು ದಟ್ಟವಾಗಿ ಬೆಳೆದು ನಿಂತಿವೆ. ಚರಂಡಿಯಲ್ಲಿ ಮಲಿನ ನೀರು ಹರಿಯಲು ಅವಕಾಶವೇ ಇಲ್ಲದಂತಾಗಿದೆ.`ಕಸದ ತೊಟ್ಟಿಯಲ್ಲಿ ತ್ಯಾಜ್ಯವನ್ನು ಚೆಲ್ಲುವ ಬದಲು ಕೆಲವರು ಚರಂಡಿ ಯಲ್ಲಿಯೇ ಚೆಲ್ಲುತ್ತಾರೆ. ಆಹಾರ ಹುಡುಕಿಕೊಂಡು ನಾಯಿಗಳು ಮತ್ತು ಹಂದಿಗಳು ಬಂದು ತ್ಯಾಜ್ಯವನ್ನು ಚೆಲ್ಲಾ ಪಿಲ್ಲಿ ಮಾಡುತ್ತವೆ. ನೀರು ನಿಂತಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗಿದೆ. ಇದರ ಕುರಿತು ಗ್ರಾಮ ಪಂಚಾಯಿತಿಗೆ ದೂರು ನೀಡಿದರೆ, ಅವರು ಸಿಬ್ಬಂದಿ ಕೊರತೆ ಮತ್ತು ಇತರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಹೋಬಳಿ ಕೇಂದ್ರದಲ್ಲಿಯೇ ಈ ರೀತಿಯ ಪರಿಸ್ಥಿತಿಯಿದ್ದರೆ, ಇತರ ಸಣ್ಣಪುಟ್ಟ ಗ್ರಾಮಗಳ ಪರಿಸ್ಥಿತಿ ಏನು~ ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.`ರಾತ್ರಿ ವೇಳೆ ಇಲ್ಲಿ ಸಂಚರಿಸಲು ಭಯವಾಗುತ್ತದೆ. ಬೀದಿ ದೀಪಗಳಿಲ್ಲದೇ ತುಂಬ ತೊಂದರೆಯಾಗಿದೆ. ಸರ್ಕಾರದ ವತಿಯಿಂದ ಪಂಚಾಯಿತಿಗೆ ಬಹಳಷ್ಟು ಅನುದಾನ ಬರುತ್ತಿದ್ದರೂ ಸದ್ಬಳಕೆ ಯಾಗುತ್ತಿಲ್ಲ. ಕಾಟಾಚಾರಕ್ಕೆ ದೀಪ ಗಳನ್ನು ಅಳವಡಿಸಲಾಗುತ್ತದೆ.ಪರಿಸ್ಥಿತಿ ಹೀಗಿರುವಾಗ, ಸಮಸ್ಯೆ ಗಳನ್ನು ನಾವು ಯಾರ ಮುಂದೆ ಹೇಳಿಕೊಳ್ಳಬೇಕು~ ಎಂದು ಗ್ರಾಮಸ್ಥ ಅಫ್ಸರ್ ಪಾಷಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry