ಭಾನುವಾರ, ಮೇ 9, 2021
20 °C

ಅವ್ಯವಸ್ಥೆಯ ದಸರಾ ಕ್ರೀಡಾಕೂಟ: ದೂರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಸ್ಪರ್ಧಿಸಿದ ಹಲವು ಕ್ರೀಡಾಪಟುಗಳು ಮೈದಾನದಲ್ಲಿದ್ದ ಕಲ್ಲು, ಗಾಜಿನ ಚೂರುಗಳಿಂದ ಗಾಯಗೊಂಡಿದ್ದಾರೆ.ಬಂಗಾರಪೇಟೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲೂ ಇದೇ ಬಗೆಯ ಅವ್ಯವಸ್ಥೆಯಿಂದ ಕ್ರೀಡಾಪಟುಗಳು ಗಾಯಗೊಂಡಿದ್ದರು. ಇದೀಗ ಜಿಲ್ಲಾ ಕೇಂದ್ರದಲ್ಲೆ ನಡೆದಿರುವ ಕ್ರೀಡಾಕೂಟದಲ್ಲೂ ಕ್ರೀಡಾಪಟುಗಳು ಗಾಯಗೊಂಡಿದ್ದಾರೆ.

 

ಕ್ರೀಡಾಕೂಟವನ್ನು ಸಂಘಟಿಸಿರುವ ಯುವಜ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವಿರುದ್ಧ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆಗಿರುವ ಹಾನಿ, ಗಾಯಗಳ ಬಗ್ಗೆ ದೂರಿದರೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಲ್ಲಿ ತೊಂದರೆಯಾಗಬಹುದು ಎಂಬ ಭಯದಿಂದ ಹಲವು ಕ್ರೀಡಾಪಟುಗಳು ತಮ್ಮ ಹೆಸರು ಹೇಳಲು ನಿರಾಕರಿಸಿದರು.ಓಟದ ಟ್ರ್ಯಾಕ್‌ಗಳಿಗೆ ರಂಗೋಲಿ ಪುಡಿಯನ್ನು ಬಳಸುವ ಬದಲು ಡಾಂಬರು ರಸ್ತೆಗೆ ಹಾಕುವ ಜಲ್ಲಿ ಪುಡಿಯನ್ನು ಹಾಕಿದ ಪರಿಣಾಮವಾಗಿಯೂ ಓಟಗಾರರಿಗೆ ತೊಂದರೆಯಾಯಿತು. ಕ್ರೀಡಾಕೂಟವನ್ನು ಸಂಘಟಿಸುವಲ್ಲಿ ಯುವಜನ ಸೇವೆ ಇಲಾಖೆಯು ನಿರ್ಲಕ್ಷ್ಯ ವಹಿಸಿದೆ ಎಂದು ಕ್ರೀಡಾ ತರಬೇತುದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.`ಹೆಮ್ಮೆಯ ದಸರಾ ಕ್ರೀಡಾಕೂಟವನ್ನು ಸಂಘಟಿಸುವಲ್ಲಿ ಇಲಾಖೆಯು ತೀವ್ರ ನಿರ್ಲಕ್ಷ್ಯ ವಹಿಸಿದೆ. ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮವೇ ನಡೆಯಲಿಲ್ಲ. ಕ್ರೀಡಾಪಟುಗಳಿಗೆ ತೊಂದರೆಯಾಗಿದೆ~ ಎಂದು ಮತ್ತೊಬ್ಬ ದೈಹಿಕ ಶಿಕ್ಷಕರೊಬ್ಬರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.