ಮಂಗಳವಾರ, ಅಕ್ಟೋಬರ್ 22, 2019
21 °C

ಅವ್ಯವಸ್ಥೆಯ ಪಿಂಚಣಿ ಯೋಜನೆ

Published:
Updated:

2006ರ ಮಾರ್ಚ್ ನಂತರ ನೇಮಕವಾದ ಎಲ್ಲಾ ನೌಕರರಿಗೂ ಸರ್ಕಾರ ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್.) ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದ ವಿಚಾರ.ನೌಕರರಿಂದ ಶೇ.10ರಷ್ಟು ವಂತಿಗೆ ವಸೂಲಿ ಮಾಡಿ ಸರ್ಕಾರವೂ ಅಷ್ಟೇ ಪ್ರಮಾಣದ ಹಣ ತೊಡಗಿಸಿ ಬಡ್ಡಿ ಕೊಡುವ ಆಮಿಷ ಒಡ್ಡಿದೆ. ಆದರೆ ಇದಕ್ಕೆ ಯಾವುದೇ ಬಾಂಡ್ ಆಗಲಿ, ಪತ್ರಗಳಾಗಲಿ, ಬಡ್ಡಿ ಎಷ್ಟು ಕೊಡುತ್ತಾರೆ ಎನ್ನುವ ಬಗ್ಗೆ ಎಲ್ಲಿಯೂ ತಿಳಿಸಿಲ್ಲ.ಮೇಲಿನ ಎಲ್ಲಾ ನ್ಯೂನತೆಗಳಿರುವ ಈ ಯೋಜನೆಗೆ ಒಳಪಟ್ಟಿರುವ ನೌಕರರಿಗೆ ವೇತನವೂ ಸಹ ತಡವಾಗಿ ಆಗುತ್ತಿದೆ. ಅದರ ಜೊತೆ ಎನ್.ಪಿ.ಎಸ್. ಯೋಜನೆಗೆ ಸೇರಿರುವ ಬೇರೆ ನೌಕರರ ವೇತನವೂ ತಡವಾಗುತ್ತಿದೆ. ಹೊಸ ಯೋಜನೆಯಿಂದ ಬೇಸತ್ತಿರುವ ನೌಕರರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

 

ಇದರ ಬಗ್ಗೆ ಖಜಾನೆಯಲ್ಲಿ ಕೇಳಿದರೆ ಕಂಪ್ಯೂಟರ್ ಎನ್.ಪಿ.ಎಸ್. ಬಿಲ್ಲನ್ನು ತೆಗೆದು ಕೊಳ್ಳುತ್ತಿಲ್ಲ ಎನ್ನುತ್ತಾರೆ. ಇದು ಸಾಧ್ಯವೇ? ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಬೇಕು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)