ಭಾನುವಾರ, ಜೂನ್ 20, 2021
21 °C

ಅವ್ಯವಸ್ಥೆ ಆಗರವಾದ ಪ್ರಾಥಮಿಕ ಆರೋಗ್ಯ ಕೇಂದ್ರ

ಪ್ರಜಾವಾಣಿ ವಾರ್ತೆ ಎಚ್.ಎಸ್.ಶ್ರೀಹರಪ್ರಸಾದ್ Updated:

ಅಕ್ಷರ ಗಾತ್ರ : | |

ಮರಿಯಮ್ಮನಹಳ್ಳಿ: ಸ್ಥಳೀಯ ಪ್ರಾಥಮಿಕ ಆರೋಗ್ಯದ ಕೇಂದ್ರವು ಅವ್ಯವಸ್ಥೆಗಳ ಆಗರವಾಗಿದ್ದು, ಸಾರ್ವ ಜನಿಕರ ಆರೋಗ್ಯ ಸೇವೆ ಒದಗಿಸ ಬೇಕಾದ ಕೇಂದ್ರವೇ ಮೂಲಸೌಕರ್ಯ ಇಲ್ಲದೆ ಆನಾರೋಗ್ಯದಿಂದ ಬಳಲು ತ್ತಿದ್ದು ಸಾರ್ವಜನಿಕರು ತೊಂದರೆ ಪಡುವಂತಾಗಿದೆ.ಮುಖ್ಯವಾಗಿ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರು ಹಾಗೂ ಮಹಿಳಾ ವೈದ್ಯರಿಲ್ಲದೇ ಸಾರ್ವಜನಿಕರ ತೀವ್ರ ತೊಂದರೆ ಅನುಭವಿಸು ವಂತಾಗಿದೆ. ಇರುವ ಆಯುಷ್ ವೈದ್ಯರು ಮಾತ್ರ  ಎಲ್ಲವನ್ನು ನಿಭಾಯಿಸಿ ಕೊಂಡು ಹೋಗಬೇಕಾಗಿದೆ. ಅಲ್ಲದೇ ಇರುವ ಆ ವೈದ್ಯರು ಕೆಲಸ ನಿಮಿತ್ತ ಮೀಟಿಂಗ್, ರಜೆ ಮೇಲೆ ತೆರಳಿದರೆ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡುವವರು ಇಲ್ಲದಂತಾಗುತ್ತದೆ.ತಿಂಗಳಿಗೆ ಎರಡು ಬಾರಿ ನಡೆಯುವ ಮಹಿಳೆಯರ ಸಂತಾನಶಕ್ತಿ ಹರಣ ಚಿಕಿತ್ಸೆಯ ಸಂದರ್ಭದಲ್ಲಿ ಚಿಕಿತ್ಸೆಗೊಳ ಗಾದ ಮಹಿಳೆಯರಿಗೆ ಮಲಗಲು ಸರಿಯಾದ ಹಾಸಿಗೆ ವ್ಯವಸ್ಥೆ ಇಲ್ಲದೆ ನಡೆದಾಡುವ ವರಾಂಡದಲ್ಲಿ ಮಲಗಿ ರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತವೆ.ಅಲ್ಲದೆ ಬಹುತೇಕ ಖಾಲಿ ಇರುವ ಸಿಬ್ಬಂದಿಯ ಸ್ಥಾನಗಳು ಭರ್ತಿಯಾಗದ ಕಾರಣ ಹಾಗೂ ರಾತ್ರಿಯ ಸಮಯದಲ್ಲಿ ಹೆರಿಗೆ ಬರುವ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಿಬ್ಬಂದಿಗಳು ಸರಿಯಾಗಿ ಇರದೇ ಸಾರ್ವಜನಿಕರು ಪರದಾಡು ವಂತಾಗಿದೆ.ಸಿಬ್ಬಂದಿಯ ಅನುಚಿತ ವರ್ತನೆ ಬಗ್ಗೆಯೂ ಸಾರ್ವಜನಿಕರು ದೂರು ವ್ಯಕ್ತಪಡೆಸಿದ್ದು,  ಕೆಲ ಸಿಬ್ಬಂದಿ ಮದ್ಯಪಾನ ಮಾಡಿ ಕೆಲಸ ನಿರ್ವಹಿಸು ತ್ತಿರುವ ಬಗ್ಗೆ ಕೇಂದ್ರಕ್ಕೆ ರೋಗಿಗಳು ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಕಳೆದ ವಾರವಷ್ಟೇ ಮಹಿಳೆಯೊಬ್ಬರ ಜತೆ ಮದ್ಯಪಾನ ಮಾಡಿ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಯನ್ನು ಕೇಂದ್ರ ದಲ್ಲಿಯೇ ಥಳಿಸಿದ ಘಟನೆಯೂ ಜರುಗಿದೆ.ಕತ್ತಲಾಗುತ್ತಿದ್ದಂತೆ ಕೇಂದ್ರದ ಆವರಣ ಬಾರ್ ಆಗುತ್ತಿದ್ದು, ಎಲ್ಲೆಂದ ರಲ್ಲಿ ಮದ್ಯ ಬಾಟಲಿಗಳು ಬಿಸಾಡಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತವೆ ಎಂದು ವೆಂಕಟೇಶ್ ಅವರು ದೂರುತ್ತಾರೆ. ಅಲ್ಲದೆ ಕೇಂದ್ರದಲ್ಲಿ ಬರುವ ರೋಗಿಗಳಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಮತ್ತು ಶೌಚಾಲದ ವ್ಯವಸ್ಥೆಯಾಗಿ ಇಲ್ಲದಿರುವದು ರೋಗಿಗಳು ತೊಂದರೆ ಪಡುವಂತಾಗಿದೆ.ಆರೋಗ್ಯ ಕೇಂದ್ರದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ 13 ಹಾದು ಹೋಗಿರುವುದರಿಂದ ದಿನನಿತ್ಯ ಒಂದಿಲ್ಲೊಂದು ಅಪಘಾತಗಳು ಸರ್ವೇ ಸಾಮಾನ್ಯವಾಗಿದ್ದು, ಇಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯಗಳು ಹಾಗೂ ವೈದ್ಯರು ಇಲ್ಲದ ಕಾರಣ, ಸಣ್ಣಪುಟ್ಟ ಚಿಕಿತ್ಸೆಗೂ ಹಾಗೂ ಇತರೆ ಪ್ರತಿಯೊಂದಕ್ಕೂ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸ ಬೇಕಿದೆ. ಆರೋಗ್ಯ ಕೇಂದ್ರ ಇದ್ದು ಸಾರ್ವಜನಿಕರ ಸೇವೆಗೆ ಇಲ್ಲದಂತಾಗಿದೆ.ಇನ್ನು ಪಟ್ಟಣದ ಜನಸಂಖ್ಯೆ ದಿನೇ ದಿನೇ ಏರುತ್ತಿದ್ದು, ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಹಾಗೂ ಎಂಬಿಬಿಎಸ್ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳು ಜನಪ್ರತಿನಿಧಿಗಳಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಾರ್ವಜನಿಕರು ದೂರುತ್ತಿದ್ದು, ಪ್ರತಿಭಟನೆಗೂ ಮುಂದಾಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.