ಅವ್ಯವಹಾರ: ತನಿಖೆಗೆ ಆಗ್ರಹಿಸಿ ಧರಣಿ

ಬುಧವಾರ, ಜೂಲೈ 24, 2019
28 °C

ಅವ್ಯವಹಾರ: ತನಿಖೆಗೆ ಆಗ್ರಹಿಸಿ ಧರಣಿ

Published:
Updated:

ಬೀದರ್: ಔರಾದ್ ತಾಲ್ಲೂಕಿನ ಲಾಧಾ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 13ನೇ ಹಣಕಾಸು ಯೋಜನೆ, ಬಿ.ಆರ್.ಜಿ.ಎಫ್. ಹಾಗೂ ನಿರ್ಮಲ ಭಾರತ ಯೋಜನೆಯಡಿ ಅವ್ಯವಹಾರ ಎಸಲಾಗಿದೆ.ಇಂದಿರಾ ಆವಾಸ್ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಮನೆಗಳನ್ನು ಸರ್ಕಾರಿ ನೌಕರರು ಹಾಗೂ ಶ್ರೀಮಂತರಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ದೂರಿದ್ದಾರೆ.ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆ ನಡೆಸಬೇಕು. ಮತ್ತು ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಾಂಪಾಡ ಗ್ರಾಮದಲ್ಲಿ ಅಂಬೇಡ್ಕರ್ ಭವನದ ತಳಪಾಯ ನೆಲಸಮಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಖಾತರಿ ಯೋಜನೆಯಡಿ ಕೆಲಸ ಒದಗಿಸಬೇಕು. ಮುಸ್ತಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಕೂಡಲೇ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಬೋಸ್ಲೆ, ಸಂಘಟನಾ ಸಂಚಾಲಕ ಸುಧಾಕರ ರಾಜಗೀರಾ, ಶಂಭುಲಿಂಗ ಅಮಲಾಪುರ, ರಘುನಾಥ ಕಾಂಬಳೆ, ಮಾಣಿಕ ಪವಾರ್, ಸಂಜುಕುಮಾರ್ ಭಾವಿಕಟ್ಟಿ, ಸಂಜೀವಕುಮಾರ್ ಲಾಧಾ, ಯಶವಂತ ಪಾಟೀಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry