ಅಶುದ್ಧ ನೀರು ಮನುಕುಲದ ಶತ್ರು: ಕಳವಳ

7

ಅಶುದ್ಧ ನೀರು ಮನುಕುಲದ ಶತ್ರು: ಕಳವಳ

Published:
Updated:

ಲಿಂಗಸುಗೂರ: ಅಶುದ್ಧ ನೀರು ಮನುಕುಲದ ನಾಶಕ್ಕೆ ಕಾರಣವಾಗಿ ಪರಿಣಮಿಸಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಕಳವಳ ವ್ಯಕ್ತಪಡಿಸಿದರು.ತಾಲ್ಲೂಕಿನ ಐದನಾಳ ಗ್ರಾಮದಲ್ಲಿ ಮಂಗಳವಾರ ಲಿಂ. ಪಾರ್ವತೆಮ್ಮ ಶರಣಗೌಡ ಪಾಟೀಲ ಸ್ಮರಣಾರ್ಥ ಸ್ಥಾಪಿಸಿದ `ವೀರಭದ್ರೇಶ್ವರ ಶುದ್ಧ ನೀರು' ಘಟಕ ಉದ್ಘಾಟಿಸಿ ಮಾತನಾಡಿದರು.

ಇಂದಿಗೂ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಸರ್ಕಾರಗಳು  ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಂಸದ ಎ. ವೆಂಕಟೇಶ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್. ನಾಡಗೌಡ್ರ, ಅಂಕಲಿಮಠದ ವೀರಭದ್ರ ಮಹಾಸ್ವಾಮಿ, ಮೈಸೂರ ರಾಮಕೃಷ್ಣ ಆಶ್ರಮದ ವಿರೇಶಾನಂದಜೀ, ಲಿಂಗನಗೌಡ ಪೊಲೀಸ್ ಪಾಟೀಲ, ದೊಡ್ಡಬಸಪ್ಪಗೌಡ ಭೋಗಾವತಿ, ಲಾಲಅಹ್ಮದಸಾಬ, ಶರಣಪ್ಪ ಮೇಟಿ, ಹನುಮಂತಪ್ಪ ತೊಗರಿ, ರಮೇಶ ಜೋಶಿ, ಪ್ರೇಮಾಬಾಯಿ ರಾಠೋಡ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry