ಅಶುದ್ಧ ನೀರು ಮಾರಾಟ ತಡೆಗೆ ಮನವಿ

7

ಅಶುದ್ಧ ನೀರು ಮಾರಾಟ ತಡೆಗೆ ಮನವಿ

Published:
Updated:

ಕೋಲಾರ: ಜಿಲ್ಲೆಯಲ್ಲಿ ಅಶುದ್ಧ ಹಾಗೂ ಕುಡಿಯಲು ಯೋಗ್ಯವಲ್ಲದ ನೀರು ಮಾರಾಟ ಮಾಡುತ್ತಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೋಲಾರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ  ಸಮಿತಿ (ಪುಟ್ಟಣ್ಣಯ್ಯ ಬಣ) ಈಚೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.ಜಿಲ್ಲೆಯಲ್ಲಿನ ಶೇ 90ರಷ್ಟು ನೀರು ಅಶುದ್ಧ ಎಂದು ಸರ್ಕಾರದ ಪ್ರಯೋಗಾಲಯ ದೃಢಪಡಿಸಿದೆ.ಆದರೆ ಕೆಲವರು ಇದನ್ನೆ ಬಂಡವಾಳ ಮಾಡಿಕೊಂಡು ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಿಕೊಂಡು ಜನತೆಗೆ ಕೊಳಕು, ವಿಷಯುಕ್ತ ನೀರನ್ನೇ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.ನೀರು ಪೂರೈಕೆ ಘಟಕಗಳ ಖಾಸಗಿ ಪೂರೈಕೆದಾರರು ಶುದ್ದ ನೀರು ಪೂರೈಕೆ ಮಾಡುತ್ತೇವೆ ಎಂದು ಐಎಸ್‌ಐ ಚಿಹ್ನೆ ಪಡೆದು ಕ್ಯಾನ್ ಮತ್ತು ಪಾಕೇಟ್ ಬಾಟೆಲ್‌ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಜವಾಬ್ದಾರಿ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ  ನಾರಾಯಣಗೌಡ, ಹುಲ್ಕೂರು ಹರಿಕುಮಾರ್, ಕೆ.ಶ್ರೀನಿವಾಸಗೌಡ, ಬಂಗವಾದಿ ನಾಗರಾಜ್‌ಗೌಡ, ಬಿಸನಹಳ್ಳಿ ಮುಕುಂದಗೌಡ, ಕೆಂಬೋಡಿ ಕೃಷ್ಣೇಗೌಡ, ಕೃಷ್ಣಪ್ಪ, ಆವಲಪ್ಪ, ಶ್ರೀರಾಮಪ್ಪ ಮುಂತಾದವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry