ಅಶೋಕ್‌ ವೇಮೂರಿ ಐಗೇಟ್‌ ‘ಸಿಇಒ’

7

ಅಶೋಕ್‌ ವೇಮೂರಿ ಐಗೇಟ್‌ ‘ಸಿಇಒ’

Published:
Updated:

ಮುಂಬೈ(ಪಿಟಿಐ): ಪ್ರಮುಖ ಹೊರಗುತ್ತಿಗೆ ಕಂಪೆನಿ ‘ಐಗೇಟ್‌’ ಅಶೋಕ್‌ ವೇಮೂರಿ ಅವರನ್ನು ಅಧ್ಯಕ್ಷ–ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಿಕೊಂಡಿದೆ. ನೇಮಕ ಆದೇಶ ಸೆ. 16ರಿಂದ ಜಾರಿಗೆ ಬರಲಿದೆ.ವೇಮೂರಿ ಇತ್ತೀಚೆಗಷ್ಟೇ ‘ಇನ್ಫೊಸಿಸ್‌’ನಿಂದ ಹೊರಬಂದಿದ್ದರು. ಅವರು ಇನ್ಫೊಸಿಸ್‌ ಅಮೆರಿಕ ಘಟಕದಲ್ಲಿ ತಯಾರಿಕೆ ಮತ್ತು ಎಂಜಿನಿಯರಿಂಗ್‌ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದರು. ಶಿಬುಲಾಲ್‌ ನಂತರ ಇನ್ಫೊಸಿಸ್‌ನ ಸಂಭಾವ್ಯ ‘ಸಿಇಒ’ಗಳ ಸಾಲಿನಲ್ಲಿ ವೇಮೂರಿ  ಮುಂಚೂಣಿಯಲ್ಲಿದ್ದರು.ಭಾರಿ ಶೋಧದ ನಂತರ ಅಶೋಕ್‌ ವೇಮೂರಿ ಅವರನ್ನು ಆಯ್ಕೆ ಮಾಡ ಲಾಗಿದೆ. ಅವರನ್ನು ಕಂಪೆನಿಗೆ ಬರಮಾಡಿಕೊಳ್ಳಲು ಹರ್ಷವೆನಿಸುತ್ತದೆ ಎಂದು ಐಗೇಟ್‌ನ ಸಂಸ್ಥಾಪಕರಲ್ಲೊಬ್ಬರಾದ ಸುನೀಲ್‌ ವಾದ್ವಾನಿ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry