ಬುಧವಾರ, ನವೆಂಬರ್ 20, 2019
20 °C

ಅಶೋಕ್ ಮುಖರ್ಜಿ ಕಾಯಂ ಪ್ರತಿನಿಧಿ

Published:
Updated:
ಅಶೋಕ್ ಮುಖರ್ಜಿ ಕಾಯಂ ಪ್ರತಿನಿಧಿ

ವಿಶ್ವಸಂಸ್ಥೆ(ಐಎಎನ್‌ಎಸ್): ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಅಶೋಕ್ ಕುಮಾರ್ ಮುಖರ್ಜಿ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.ಅಶೋಕ್ ಕುಮಾರ್ ಅವರು ಮಂಗಳವಾರ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ- ಮೂನ್ ಅವರಿಗೆ `ಕಾಯಂ ಪ್ರತಿನಿಧಿಯ' ನೇಮಕ ಪತ್ರವನ್ನು ನೀಡಿದ್ದಾರೆ.

ಈ ಹಿಂದೆ ಕಾಯಂ ಪ್ರತಿನಿಧಿಯಾಗಿದ್ದ ಹರ್‌ದೀಪ್‌ಸಿಂಗ್ ಪುರಿ ಅವರ ಅಧಿಕಾರಾವಧಿ ಫೆಬ್ರುವರಿ 28ಕ್ಕೆ ಪೂರ್ಣಗೊಂಡ ನಂತರ  ತೆರವಾದ ಸ್ಥಾನಕ್ಕೆ ಅಶೋಕ್ ಕುಮಾರ್ ಅವರನ್ನು ನೇಮಿಸಲಾಗಿದೆ.

ಪ್ರತಿಕ್ರಿಯಿಸಿ (+)