ಅಶೋಕ ಸ್ತೂಪ ಪುನರುಜ್ಜೀವ

ಭಾನುವಾರ, ಮೇ 26, 2019
26 °C

ಅಶೋಕ ಸ್ತೂಪ ಪುನರುಜ್ಜೀವ

Published:
Updated:

ನ್ಯಾಂಗ್‌ಚೆನ್ (ಚೀನಾ) (ಐಎಎನ್‌ಎಸ್): ಎರಡು ಸಾವಿರ ವರ್ಷ ಹಳೆಯದಾದ ಅಶೋಕ ಸ್ತೂಪವನ್ನು ಪುನರುಜ್ಜೀವಗೊಳಿಸುವ ಜತೆಗೆ 60 ಲಕ್ಷ ಡಾಲರ್ ವೆಚ್ಚದಲ್ಲಿ  35 ಮೀಟರ್ ಎತ್ತರದ ಬುದ್ಧ ಪ್ರತಿಮೆಯ ಪ್ರತಿಷ್ಠಾಪನೆ ಕಾರ್ಯ ಇಲ್ಲಿ ನೆರವೇರಿತು.ಈ ಕಾರ್ಯವನ್ನು  ಹೊಸ ಶಕೆಯ ಆರಂಭ ಎಂದೇ ಭಾವಿಸಿರುವ ಸ್ಥಳೀಯರು, ಇದರಲ್ಲಿ ಆರ್ಥಿಕ ಬೆಳವಣಿಗೆಯ ಆಶಾಕಿರಣವನ್ನೂ ಕಾಣತೊಡಗಿದ್ದಾರೆ.  ಭಾರತದ ಸಾಮ್ರಾಟನಾಗಿದ್ದ ಅಶೋಕನು ನಿರ್ಮಿಸಿದ್ದ ಈ ಸೂಪ್ತದ ಪುನರುಜ್ಜೀವ ಕಾರ್ಯ 10 ವರ್ಷಗಳ ಹಿಂದೆ ಶುರುವಾಗಿತ್ತು. ಸಿಂಗಪುರ ಮೂಲದ ಉದ್ಯಮಿ ಫೆಲಿಕ್ ಲಿಮ್ ಯೆಆಂಗ್ ಹಾಗೂ ಆತನ ಪತ್ನಿ ಇದರ ವೆಚ್ಚ ಭರಿಸಿದ್ದಾರೆ.ಈ ಬುದ್ಧನ ಪ್ರತಿಮೆಯ ನಮೂನೆ ಸಿದ್ಧಪಡಿಸಿದ ಶಿಲ್ಪಿ ಭೂತಾನ್‌ದವರು. ನಂತರ, ಬುದ್ಧನ ಪ್ರತಿಮೆಗಳ ನಿರ್ಮಾಣಕ್ಕೆ ಹೆಸರಾದ ನ್ಯಾನ್‌ಜಿಂಗ್‌ನ ಕಾರ್ಖಾನೆಯೊಂದರಲ್ಲಿ ಇದರ ಅಚ್ಚು ಮಾಡಿಸಲಾಯಿತು. ಗಗನ ನೌಕೆ ತಯಾರಿಸಲು ಬಳಸುವ ಮಿಶ್ರಲೋಹಗಳನ್ನು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ ಎಂದು ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry