ಅಶ್ಲೀಲ ಎಂಎಂಎಸ್: ಆರೋಪಿ ಬಂಧನ

7

ಅಶ್ಲೀಲ ಎಂಎಂಎಸ್: ಆರೋಪಿ ಬಂಧನ

Published:
Updated:

ಬೆಂಗಳೂರು: ಸಹೋದ್ಯೋಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಅದರ ದೃಶ್ಯಗಳನ್ನು ಹಲವರಿಗೆ ಎಂಎಂಎಸ್ ಮಾಡಿದ ಆರೋಪದ ಮೇಲೆ ಕುಂದಲಹಳ್ಳಿಯ ಸಂಸಾರ್ ಸೂಪರ್ ಮಾರ್ಕೆಟ್‌ನ ವ್ಯವಸ್ಥಾಪಕ ಅಜೀಜ್ (22) ಎಂಬಾತನನ್ನು ಮಹದೇವಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಘಟನೆಯ ಸಂಬಂಧ ಅದೇ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಸುಷ್ಮಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಹುಡುಗಿ ದೂರು ಕೊಟ್ಟಿದ್ದಾಳೆ. ಮೂಲತಃ ಕೋಲಾರದ ಸುಷ್ಮಿತಾ ಕೆಲ ತಿಂಗಳ ಹಿಂದಷ್ಟೆ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ತನ್ನ ಸೋದರಿ ಜತೆ ಕುಂದಲಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದಾಳೆ.`ನ.17ರಂದು ಸುಷ್ಮಿತಾ ಜತೆ ಲೈಂಗಿಕ ಕ್ರಿಯೆ ನಡೆಸಿದ ಅಜೀಜ್, ಆಕೆಗೆ ತಿಳಿಯದಂತೆ ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಆ ವಿಡಿಯೋವನ್ನು ಸುಷ್ಮಿತಾ ಸೇರಿದಂತೆ ಕೆಲ ಸಹೋದ್ಯೋಗಿಗಳಿಗೂ ಎಂಎಂಎಸ್ ಮಾಡಿದ್ದಾನೆ. ಇದರಿಂದ ಆಘಾತಗೊಂಡ ಆಕೆ, ತನ್ನ ಸೋದರಿಗೆ ವಿಷಯ ತಿಳಿಸಿ ಅಜೀಜ್ ಸೇರಿದಂತೆ ಮತ್ತಿಬ್ಬರು ಸಹೋದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ದೂರಿನನ್ವಯ ಅಜೀಜ್‌ನನ್ನು ಬಂಧಿಸಲಾಗಿದ್ದು, ಮತ್ತಿಬ್ಬರ ಶೋಧ ಕಾರ್ಯ ನಡೆಯುತ್ತಿದೆ' ಎಂದು ಪೊಲೀಸರು ಹೇಳಿದ್ದಾರೆ.ಈ ಸುದ್ದಿ ತಿಳಿದ ಕೆಲ ಮಹಿಳಾ ಸಂಘಟನೆಗಳ ಸದಸ್ಯರು ಸಂಸಾರ್ ಸೂಪರ್ ಮಾರ್ಕೆಟ್ ಎದುರು ಪ್ರತಿಭಟನೆ ನಡೆಸಿ, ಮಳಿಗೆ ಮುಚ್ಚುವಂತೆ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry