ಮಂಗಳವಾರ, ಜೂನ್ 15, 2021
23 °C

ಅಶ್ವಮೇಧಯಾಗ ಖಂಡಿಸಿ ಸಿಪಿಎಂ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ಹೊರ ವಲಯದಲ್ಲಿ ನಡೆಯುತ್ತಿರುವ ಸಾಂಕೇತಿಕ ಅಶ್ವಮೇಧ ಯಾಗವನ್ನು ವಿರೋಧಿಸಿ ಸಿಪಿಐ(ಎಂ)  ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.ಹೇಮಾವತಿ ಪ್ರತಿಮೆ ಮುಂದೆ ಸಭೆ ಸೇರಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾರ್ಯದರ್ಶಿ          ಧರ್ಮೇಶ್, `ಅಶ್ವಮೇಧ ಯಾಗ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ವೈದಿಕ ಪುರೋಹಿತಶಾಹಿ ಪಾಳೇಗಾರಿಕೆ ಸಂಸ್ಕೃತಿಯ ವಿಕೃತ ಆಚರಣೆ~ ಎಂದರು.`ಯಾಗದ ಹೆಸರಿನಲ್ಲಿ ಸಮಾಜದ ದುಡಿಮೆಯ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿಮಾಡಲಾಗುತ್ತಿತ್ತು. ಯಜ್ಞಕ್ಕೆ ಹವಿಸ್ಸು ನೀಡಲು ಪ್ರಾಣಿಗಳ ಮಾರಣ ಹೋಮವೇ ನಡೆಯುತ್ತಿತ್ತು. ಇಂತಹ ಜನವಿರೋಧಿ, ಜೀವವಿರೋಧಿ ಹಿನ್ನೆಲೆ ಹೊಂದಿರುವ ಅಶ್ವಮೇಧಯಾಗ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯವಿಲ್ಲ~ ಎಂದರು.ದಲಿತ ಮುಖಂಡ ಎಚ್.ಕೆ.ಸಂದೇಶ್ ಮಾತನಾಡಿ `ಯಾಗದ ಜಾಗದಲ್ಲಿ ಪುರೋಹಿತರಿಗೆ ಒಂದು ತರಹದ ಊಟ ಹಾಗೂ ಇತರ ಭಕ್ತರಿಗೆ ಒಂದು ತರಹದ ಊಟದ ವ್ಯವಸ್ಥೆ ಮಾಡುವ ಮುಖಾಂತರ ಪಂಕ್ತಿಭೇದ ಮಾಡಲಾಗುತ್ತಿದೆ. ಸಮಾಜದ ಸಂಪತ್ತಿನ ಲೂಟಿಗೆ ಈ ಯಾಗ ವೇದಿಕೆಯಾಗಿದೆ~ ಎಂದರು.ವಿಚಾರವಾದಿಗಳ ಸಂಘದ ಶ್ರೀನಿವಾಸ ನಟೇಕರ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಕುಮಾರ್, ಎಚ್.ಟಿ.ರಾಮೇಗೌಡ, ಹೆತ್ತೂರು ನಾಗರಾಜ್, ಕ್ರಾಂತಿ ತ್ಯಾಗಿ, ಬಿ.ಜಿ.ಗಿರೀಶ್, ಎಂ.ಜಿ.ಪೃಥ್ವಿ,     ಪ್ರಕಾಶ್, ಮರಿ ಜೋಸೆಫ್,           ಎಚ್.ಜಿ. ಮಂಜು ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.