ಬುಧವಾರ, ಜುಲೈ 28, 2021
25 °C

`ಅಶ್ವಮೇಧ ಪರ್ವ'ದ ತಾಳೆಗರಿ ಪ್ರತಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ:  ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಕೃತಿಯ `ಅಶ್ವಮೇಧ ಪರ್ವ'ದ ತಾಳೆಗರಿ ಪ್ರತಿಯೊಂದನ್ನು  ಸಂಶೋಧಕ ರಾದ ಕೆ.ಎಂ.ರಾಘವೇಂದ್ರಾಚಾರ್ ಹಾಗೂ ಬುರುಡೇಕಟ್ಟೆ ಮಂಜಪ್ಪ ಸಂಗ್ರಹಿಸಿದ್ದಾರೆ.19 ಇಂಚು ಉದ್ದ, ಒಂದೂವರೆ ಇಂಚು ಅಗಲ ಅಳತೆಯ 290 ಗರಿಗಳು ಈ ಸಂಗ್ರಹದಲ್ಲಿದ್ದು, 46 ಷಟ್ಪದಿ ಪದ್ಯಗಳಿವೆ.

ಈ ಬಗ್ಗೆ `ಪ್ರಜಾವಾಣಿ' ಜತೆ ಮಾತನಾಡಿದ ಮಂಜಪ್ಪ ಅವರು, `ಈಚೆಗೆ ನಗರದಲ್ಲಿ ಅಲೆಮಾರಿ ಜನಾಂಗದ ಗುಂಪೊಂದು ಎತ್ತಿನ ಬಂಡಿಯಲ್ಲಿ ಹೋಗುತ್ತಿತ್ತು. ಅದರಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ತಾಳೆ ಗರಿಗಳನ್ನು ಗಮನಿಸಿದ ನಾವು ವಿಚಾರಿಸಿದಾಗ ಮಠವೊಂದರಲ್ಲಿ ಸಿಕ್ಕಿದ್ದಾಗಿ ಅವರು ಹೇಳಿದರು. ಅವುಗಳ ಮಹತ್ವವನ್ನು ಮನವರಿಕೆ ಮಾಡಿಸಿ ನಾವು ತೆಗೆದುಕೊಂಡೆವು' ಎಂದರು.ತಾಳೆಗರಿಗಳು ಸುಸ್ಥಿತಿಯಲ್ಲಿದ್ದು, ಮುದ್ರಿತ ಕೃತಿಯಲ್ಲಿರುವ ಪದ್ಯಗಳಿಗಿಂತ ಹೆಚ್ಚಿನ ಪದ್ಯಗಳು ಇದರಲ್ಲಿವೆ. ವಿಭವ ಸಂವತ್ಸರದ ಕಾರ್ತೀಕ ಶುದ್ಧ 10 ದಶಮಿ ಸೋಮವಾರ ಪ್ರಾತಃಕಾಲ ಶುಭಲಗ್ನದಲ್ಲಿ ಕೃತಿಯ ಪ್ರತಿ ಮಾಡಲು ಆರಂಭಿಸಿದ ಉಲ್ಲೇಖವಿದೆ.60 ವರ್ಷಗಳಿಗೊಮ್ಮೆ ಸಂವತ್ಸರ ಬದಲಾಗುತ್ತದೆ. ಇದರ ಆಧಾರದಲ್ಲಿ ಊಹಿಸುವುದಾದರೆ ಕನಿಷ್ಠ ಮೂರು ಸಂವತ್ಸರಗಳ ಇತಿಹಾಸ ಇದಕ್ಕಿದೆ. ಈ ಬಗ್ಗೆ ಸಂಶೋಧನೆ ನಡೆಸುತ್ತೇನೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.