ಅಶ್ವಿನ್ ದಾಳಿಗೆ ಆಸ್ಟ್ರೇಲಿಯ ಸರ್ವಪತನ

7

ಅಶ್ವಿನ್ ದಾಳಿಗೆ ಆಸ್ಟ್ರೇಲಿಯ ಸರ್ವಪತನ

Published:
Updated:
ಅಶ್ವಿನ್ ದಾಳಿಗೆ ಆಸ್ಟ್ರೇಲಿಯ ಸರ್ವಪತನ

ಚೆನ್ನೈ (ಪಿಟಿಐ): ಚೆನ್ನೈನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ  ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ 2ನೇ ದಿನವಾದ ಶನಿವಾರ ಅಶ್ವಿನ್ ಅವರ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 380 ರನ್ ಗಳಿಗೆ ಪತನಗೊಂಡಿದೆ.ಶುಕ್ರವಾರ 7 ವಿಕೆಟ್ ಕಳೆದುಕೊಂಡು 316ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಕೇವಲ 64 ರನ್ ಗಳಿಸುವಷ್ಟರಲ್ಲಿ ಇನ್ನುಳಿದ 3 ವಿಕೆಟ್ ಗಳನ್ನೂ ಕಳೆದುಕೊಂಡಿತು.ತವರು ನೆಲದಲ್ಲಿ ಮೊದಲ ಟೆಸ್ಟ್ ಆಡುತ್ತಿರುವ ಅಶ್ವಿನ್ ಮತ್ತೆ ಇಂದು ಒಂದು ವಿಕೆಟ್ ಪಡೆದು ಆಸ್ಟ್ರೇಲಿಯಾದ ಪತನಕ್ಕೆ ಕಾರಣರಾದರು. ಒಟ್ಟಾರೆ ಅವರು 42 ಓವರ್‌ನಲ್ಲಿ 103 ರನ್ ನೀಡಿ 7 ವಿಕೆಟ್ ಪಡೆದರು. ಉಳಿದಂತೆ ರವೀಂದ್ರ ಜಡೇಜಾ 2 ಹಾಗೂ ಹರಭಜನಸಿಂಗ್ ಒಂದು ವಿಕೆಟ್ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry