ಶುಕ್ರವಾರ, ನವೆಂಬರ್ 22, 2019
20 °C

ಅಷ್ಟಗಿ ದಂಪತಿ ಆಸ್ತಿ ರೂ 1.5 ಕೋಟಿ

Published:
Updated:

ಧಾರವಾಡ: ಕರ್ನಾಟಕ ಜನತಾ ಪಕ್ಷದಿಂದ ಧಾರವಾಡ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತವನಪ್ಪ ಅಷ್ಟಗಿ ಅವರ ಪತ್ನಿ, ಜಿ.ಪಂ. ಸದಸ್ಯೆ ಕಸ್ತೂರಿ ಅಷ್ಟಗಿ ಅವರೇ ಪತಿಗಿಂತ ಶ್ರೀಮಂತೆ.ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಆಸ್ತಿ ಪ್ರಮಾಣಪತ್ರದಲ್ಲಿ ಅಷ್ಟಗಿ ತಮ್ಮ ಹಾಗೂ ಪತ್ನಿಯ ಆಸ್ತಿಯನ್ನು ಘೋಷಿಸಿದ್ದಾರೆ. ತವನಪ್ಪ ಅವರ ಚರಾಸ್ತಿ ರೂ23.73 ಲಕ್ಷವಾದರೆ, ಅವರ ಪತ್ನಿಯ ಹೆಸರಿನಲ್ಲಿ ರೂ 62.70 ಲಕ್ಷ ಇದೆ. ಸ್ಥಿರಾಸ್ತಿಯಲ್ಲಿ ತವನಪ್ಪ ಮೇಲುಗೈ ಸಾಧಿಸಿದ್ದು, 52.5 ಲಕ್ಷ ಹೊಂದಿದ್ದರೆ, ಕಸ್ತೂರಿ ಅವರು 13.51 ಲಕ್ಷದ ಸ್ಥಿರಾಸ್ತಿಯ ಒಡತಿ.ಮಹಾವೀರ ಟ್ರೇಡರ್ಸ್‌ನಲ್ಲಿ ತವನಪ್ಪ 18 ಲಕ್ಷ ಹೂಡಿಕೆ ಮಾಡಿದ್ದರೆ, ಪದ್ಮಾವತಿ ಇಂಡಸ್ಟ್ರೀಸ್‌ನಲ್ಲಿ 48 ಲಕ್ಷ ಬಂಡವಾಳವನ್ನು ಪತ್ನಿ ಹೂಡಿದ್ದಾರೆ. 2.8 ಲಕ್ಷ ಮೌಲ್ಯದ 10 ತೊಲೆ ಬಂಗಾರ ಪತಿಯ ಬಳಿ ಇದ್ದು, 12 ಲಕ್ಷ ಮೌಲ್ಯದ 40 ತೊಲೆ ಬಂಗಾರ ಹಾಗೂ 54 ಸಾವಿರ ರೂಪಾಯಿ ಮೌಲ್ಯದ ಒಂದು ಕೆಜಿ ಬೆಳ್ಳಿ ಕಸ್ತೂರಿ ಅವರ ಬಳಿ ಇದೆ. ಧಾರವಾಡ ಬಳಿ ಒಂದು ಎಕರೆ ಕೃಷಿ ಜಮೀನನ್ನು ಹೊಂದಿದ್ದು, ಅದರ ಮೌಲ್ಯ 2.5 ಲಕ್ಷ, ಪಕ್ಕದ 2 ಎಕರೆ ಕೃಷಿ ಜಮೀನು ಕಸ್ತೂರಿ ಅವರ ಹೆಸರಿನಲ್ಲಿದ್ದು, ಇದರ ಮೌಲ್ಯ 5.35 ಲಕ್ಷ. ಹನುಮನಕೊಪ್ಪ ಗ್ರಾಮದಲ್ಲಿ ಜಂಟಿಯಾಗಿ 2.23 ಗುಂಟೆ ಜಮೀನು ಖರೀದಿಸಿದ್ದು, ಇವರ ಭಾಗದ ಮೌಲ್ಯ 2 ಲಕ್ಷ. ಅದೇ ಗ್ರಾಮದಲ್ಲಿ 7 ಎಕರೆ ಜಮೀನನ್ನು ಜಂಟಿಯಾಗಿ ಖರೀದಿಸಲಾಗಿದ್ದು, ಅದರ ಮೊತ್ತ 42 ಲಕ್ಷ. ತವನಪ್ಪ ಭಾಗದ ಮೌಲ್ಯ 7 ಲಕ್ಷ. ಇನ್ನೊಂದು ಕೃಷಿ ಭೂಮಿಯೂ ಇದ್ದು ಇವರ ಪಾಲಿನ ಭಾಗದ ಮೌಲ್ಯ ರೂ 10 ಲಕ್ಷ. ಅಲ್ಲದೇ, ಹಿರೇಮಲ್ಲಿಗವಾಡ, ಮಾಳಾಪುರದಲ್ಲಿ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ಉಪ್ಪಿನ ಬೆಟಗೇರಿಯಲ್ಲಿ ಪಿತ್ರಾರ್ಜಿತವಾದ ವಾಸದ ಮನೆ ಇದೆ.

ಪ್ರತಿಕ್ರಿಯಿಸಿ (+)