ಅಷ್ಟರಂಗದ ಓಕುಳಿಯಾಟ

7

ಅಷ್ಟರಂಗದ ಓಕುಳಿಯಾಟ

Published:
Updated:

ಬಾನಂಚಿನಲ್ಲಿ ಸೂರ್ಯ ಜಾರುವ ಸಮಯ. ಸಮುದ್ರದ ದಿಗಂತದಲ್ಲಾಗ ಬಣ್ಣಗಳ ಓಕುಳಿಯಾಟ. ಅಲೆಅಲೆಯೂ ಬಣ್ಣದ ರಾಯಭಾರಿ ರೂಪು ತಳೆಯುತ್ತದೆ. ಈ ಕಡಲ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ಹಿಂಡು ನೆರೆಯುತ್ತದೆ.ಇದು ಒರಿಸ್ಸಾದ ಅಷ್ಟರಂಗ ಸಮುದ್ರ ತೀರ. ಪುರಿ ಜಿಲ್ಲೆಗೆ ಸೇರಿದ, ಅಲ್ಲಿಂದ 91 ಕಿ.ಮೀ. ದೂರದಲ್ಲಿರುವ ಈ ಕಡಲ ತಡಿ ಅದ್ಭುತ ಅನುಭವ  ನೀಡುತ್ತದೆ. ಸಂಜೆತನಕ ಮಾಮೂಲಿ ಸಮುದ್ರ ತೀರದಂತೆಯೇ ಅಪ್ಪಳಿಸುವ, ಉಕ್ಕುವ ಅಲೆಗಳು. ಬಿಸಿಲ ಏರಿಳಿತ ತಗ್ಗಿದಂತೆ ಬೀಸಿ ಬರುವ ತಂಗಾಳಿ ಮೈಮನ ಅರಳಿಸುತ್ತದೆ. ಅದಾಗಲೇ ಸೂರ್ಯ ಕೆಳಗೆ ಜಾರುತ್ತಾ ಕತ್ತಲೆ ಆವರಿಸುವ ಮುನ್ಸೂಚನೆ ಸಿಗುತ್ತದೆ. ಅದೇ ಸಮಯದಲ್ಲಿ ಈ ವಿಶಿಷ್ಟ ಸಮುದ್ರ ತೀರ ಬೇರೆಯದೇ ಸ್ವರೂಪ ಪಡೆಯುತ್ತದೆ. ಅಲ್ಲೊಂದು ಸುರಪ್ರಭೆ ಸೃಷ್ಟಿಯಾಗುತ್ತದೆ. ಆ ಅಂದವ ನೋಡಲಿಕ್ಕಾಗಿ ಪ್ರವಾಸಿಗರು ಕಾಯುತ್ತಾರೆ.ಸೂರ್ಯನಿಗೂ ತನಗೂ ಇರುವ ನಂಟನ್ನು ಬಣ್ಣದ ಮೂಲಕ ಹೇಳಲು ಹೊರಟಂತೆ ಕಾಣುವ ಈ ಕಡಲ ತಡಿಯದು ಅನನ್ಯ ಎನಿಸುವ ಸೌಂದರ್ಯ. ತೆರೆಯ ಮೇಲೆ ಬಣ್ಣ ಬಣ್ಣದ ಓಕುಳಿ ಎರಚಿದಂತೆ ಭಾಸವಾಗುತ್ತದೆ. ಅದಕ್ಕೆ ಈ ಕಡಲ ತಡಿಗೆ `ಅಷ್ಟರಂಗ~ ಎಂಬ ಹೆಸರು. ಕೊನಾರ್ಕ್‌ನ ಸೂರ್ಯ ದೇಗುಲ ನೋಡಿದ ಪ್ರವಾಸಿಗರು ಅಲ್ಲಿಂದ 19 ಕಿ.ಮೀ. ದೂರದಲ್ಲಿರುವ ಈ ಶರಧಿಯನ್ನು ನೋಡಿ ಹೋಗಬಹುದು. ಈ ಸಮುದ್ರ ತೀರಕ್ಕಿಂತ ಕೊಂಚ ದೂರದಲ್ಲಿಯೇ `ದೇವಿ~ ಹೆಸರಿನ ನದಿ ಹರಿಯುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry