ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ- ಆಗ್ರಹ

ಭಾನುವಾರ, ಜೂಲೈ 21, 2019
22 °C

ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ- ಆಗ್ರಹ

Published:
Updated:

ಮೂಡುಬಿದಿರೆ: ರಿಕ್ಷಾ ಚಾಲಕರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಖಾತರಿ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಅಚಾರಿ ಹೇಳಿದರು.

ಸಮಾಜ ಮಂದಿರದಲ್ಲಿ ಗುರುವಾರ ನಡೆದ ಇಲ್ಲಿನ `ಫೆಡರೇಶನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್'ನ (ಎಫ್‌ಕೆಎಆರ್‌ಡಿಯು) ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ರಿಕ್ಷಾ ಚಾಲಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಸೇರಿದಂತೆ ಅವರ ಅಭಿವೃದ್ಧಿಗೆ ಹೋರಾಟ ನಡೆಸುತ್ತಾ ಬಂದಿದೆ. ಮೂಡುಬಿದಿರೆಯಲ್ಲಿ ಎಫ್‌ಕೆಎಆರ್‌ಡಿಯು ಸಂಘ ಆರಂಭಿಸುವಾಗ ನಾವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೂ ಈಗ ಈ ಸಂಘಟನೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರಿಕ್ಷಾ ಚಾಲಕರು ಸನ್ನಡತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಅಪರಾಧ ಕೃತ್ಯಗಳಿಂದ ದೂರವಿರಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಸುನಿಲ್ ಕುಮಾರ್ ಬಜಾಲ್ ರಿಕ್ಷಾ ಚಾಲಕರಿಂದ ಸರಕಾರಕ್ಕೆ ಸಾವಿರಾರು ರೂಪಾಯಿ ತೆರಿಗೆ ಪಾವತಿಯಾಗುತ್ತಿದೆ. ಆದರೆ ರಿಕ್ಷಾ ಚಾಲಕರಿಗೆ ಸರ್ಕಾರ ನ್ಯಾಯ ಸಮ್ಮತ ಸೌಲಭ್ಯ ನೀಡುತ್ತಿಲ್ಲ ಎಂದು ಹೇಳಿದರು.ಎಫ್‌ಕೆಎಆರ್‌ಡಿಯುನ ಗೌರವ ಅಧ್ಯಕ್ಷ ಯಾದವ ಶೆಟ್ಟಿ ರಿಕ್ಷಾ ಚಾಲಕರು ಗೌರವಯುತವಾಗಿ ಜೀವನ ನಡೆಸಲು ಸರಕಾರ ಸಹಕಾರ ನೀಡಬೇಕು ಎಂದರು.ಸಂಘದ ಅಧ್ಯಕ್ಷ ವಿಶ್ವನಾಥ ಸುವರ್ಣ, ಪುರಸಭೆ ಸದಸ್ಯೆ ರಮಣಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಲ್.ಟಿ ಸುವರ್ಣ, ಪುರಸಬೆ ಸದಸ್ಯ ರಮಣಿ, ಕೃಷ್ಣಪ್ಪ, ಶಂಕರ ಮತ್ತಿತರರು ಉಪಸ್ಥಿತರಿದ್ದರು. ಸುಧಾಕರ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry