ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ: ಆಕ್ರೋಶ

7

ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ: ಆಕ್ರೋಶ

Published:
Updated:

ತುಮಕೂರು: ಕೇಂದ್ರ-ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ನಿರ್ಲಕ್ಷ್ಯಿಸುತ್ತಿರುವುದು ಶೋಚನೀಯ ಸಂಗತಿ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎನ್.ವೀರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ  ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ಎರಡನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ಒದಗಿಸುವಂಥ ಪ್ರಬಲ ಕಾನೂನುಗಳ ಕೊರತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.ಅಸಂಘಟಿತ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ; ಸರ್ಕಾರಗಳು ಈ ಬಗ್ಗೆ ಏನು ಅರಿಯದಂತೆ ವರ್ತಿಸುತ್ತಿವೆ. ಪರಿಹಾರಕ್ಕಾಗಿ ಹೋರಾಟವಲ್ಲ, ಕಾರ್ಮಿಕರ ರಕ್ಷಣೆಗಾಗಿ ಹೋರಾಟ ಎಂಬುದೇ ನಮ್ಮ ಧ್ಯೇಯ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಅಸಂಘಟಿತ ಕಾರ್ಮಿಕರು ರಾಜಕಾರಣಿಗಳ ಕೈಗೊಂಬೆಯಾಗಬಾರದು. ಈಚೆಗೆ ರಾಜ್ಯ ಹೈಕೋರ್ಟ್‌ನ ಜಲ್ಲಿಕಲ್ಲು ಕ್ರಷರ್ಸ್‌ ನಿಲ್ಲಿಸುವ ಆದೇಶದಿಂದ ಕಟ್ಟಡ ನಿರ್ಮಾಣವನ್ನೇ ನಂಬಿದ್ದವರು ಬೀದಿಪಾಲಾಗಿದ್ದಾರೆ ಎಂದರು.ಜಿಲ್ಲಾ ಪೌರ ಕಾರ್ಮಿಕ ಸಂಘದ ಖಜಾಂಚಿ ಕೆ.ಮಂಜುನಾಥ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅಧ್ಯಕ್ಷ ಬಿ.ಉಮೇಶ್, ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಹಾಗೂ ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳು ಹಾಜರಿದ್ದರು.ಮೆರವಣಿಗೆ: ಸಮಾವೇಶಕ್ಕೂ ಮುನ್ನ ಬೆಲೆ ಏರಿಕೆ, ವಸತಿ ಯೋಜನೆ ಕಡ್ಡಾಯ ಜಾರಿ, ಸಾರ್ವತ್ರಿಕ ಪಡಿತರ ವ್ಯವಸ್ಥೆ ಹಾಗೂ ಉದ್ಯೋಗ ಅವಕಾಶ ಹೆಚ್ಚಳಕ್ಕೆ ಒತ್ತಾಯಿಸಿ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿದರು.ಬಿಎಸ್‌ಆರ್ ಕಾಂಗ್ರೆಸ್ ಖಂಡನೆ


ತುಮಕೂರು: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಅವಮಾನ ಮಾಡಿರುವುದನ್ನು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಖಂಡಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಮುಖಂಡರಾದ ಶಿವುಚಂಗಾವರ, ಶ್ರೀನಿವಾಸ್, ವಕ್ಕೋಡಿಬಾಬು, ಎಸ್.ಟಿ.ಪ್ರಸನ್ನಕುಮಾರ್, ಓಂಕಾರ್‌ನಾಯಕ್, ಲೋಕೇಶ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.ಪರಿಹಾರ ಹಣ ವಿತರಣೆ 

ತುಮಕೂರು: ತಾಲ್ಲೂಕಿನ ಕೋಡಿಹಳ್ಳಿ ಗೇಟ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟ ಕವಿರಾಜ್ ಕುಟುಂಬಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಪಘಾತ ಪರಿಹಾರ ನಿಧಿಯಿಂದ ಮೃತನ ತಂದೆ ಅಜ್ಜಯ್ಯ ಅವರಿಗೆ  2.50 ಲಕ್ಷ ರೂ ಮೊತ್ತದ ಚೆಕ್‌ನ್ನು ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ್ ಈಚೆಗೆ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry